ಭಾರತೀಯ ಭೂಸೇನೆಗೆ ಹೊಸ ಉಪ ಮುಖ್ಯಸ್ಥರ ನೇಮಕ| ಭೂಸೇನಾ ಉಪ ಮುಖ್ಯಸ್ಥರಾಗಿ ಲೆ. ಜ. ಮನೋಜ್ ಮುಕುಂದ್ ನಾರವಾನೆ ನೇಮಕ| ಈಸ್ಟರ್ನ್ ಕಮಾಂಡ್ ಮುಖ್ಯಸ್ಥರಾಗಿರುವ ಲೆ. ಜ. ಮನೋಜ್ ಮುಕುಂದ್| ಲೆ. ಜ. ದೇವರಾಜ್ ಅನ್ಬು ಅವರಿಂದ ಖಾಲಿಯಾದ ಸ್ಥಾನ|

ನವದೆಹಲಿ(ಸೆ.01): ಈಸ್ಟರ್ನ್ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ಭಾರತೀಯ ಭೂಸೇನೆಯ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರಿಂದ ಖಾಲಿಯಾದ ಸ್ಥಾನವನ್ನು ನಾರವಾನೆ ಅಲಂಕರಿಸಿದ್ದು, ಯುದ್ಧದ ಕಾರ್ಮೊಡದ ನಡುವೆ ನಾರವಾನೆ ಮಹತ್ವದ ಜವಾಬ್ದಾರಿ ಪಡೆದಿದ್ದಾರೆ.

Scroll to load tweet…

ಲೆಫ್ಟಿನೆಂಟ್ ಜನರಲ್ ನಾರವಾನೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಸುಮಾರು ನಾಲ್ಕು ದಶಕಗಳ ಮಿಲಿಟರಿ ವೃತ್ತಿಜೀವನದಲ್ಲಿ ಹಲವು ಪ್ರಮುಖ ಸವಾಲುಗಳನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರು ವರ್ಷಗಳ ಕಾಲ ಮ್ಯಾನ್ಮಾರ್’ನ ಭಾರತೀಯ ರಾಯಭಾರ ಕಚೇರಿಯಲ್ಲಿ ಡಿಫೆನ್ಸ್ ಅಟ್ಯಾಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಕೂಡ ನಾರವಾನೆ ಅವರಿಗಿದೆ. ನಾರವಾನೆ 'ಪರಮ್ ವಿಶಿಷ್ಠ ಸೇವಾ ಪದಕ'ಕ್ಕೂ ಭಾಜನರಾಗಿದ್ದಾರೆ.