ಕಳೆದ ಜ.1 ರಿಂದ ಒಂದು ತಿಂಗಳ ಕಾಲ ರಜೆಯನ್ನು ಕೂಡಾ ತೆಗೆದುಕೊಂಡಿದ್ದರು. ಆದರೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಇಂದು ಕೊಲ್ಕತ್ತಾ ಕಚೇರಿಯಲ್ಲಿ ಲೆ|ಜ| ಬಕ್ಷಿ ಕೆಲಸಕ್ಕೆ ಹಾಜರಾಗಿದ್ದಾರೆ.

ನವದೆಹಲಿ (ಜ.14): ರಜೆಯನ್ನು ಮೊಟಕುಗೊಳಿಸುವಂತೆ ರಕ್ಷಣಾ ಸಚಿವರು ಆದೇಶಿಸಿದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಹುದ್ದೆಯ ಆಕಾಂಕ್ಷಿಯಾಗಿದ್ದ ಲೆ| ಜ| ಪ್ರವೀಣ್ ಬಕ್ಷಿಯವರು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸೇವಾ ಹಿರಿತನವಿದ್ದರೂ ಸೇನಾ ಮುಖ್ಯಸ್ಥರ ಹುದ್ದೆಗೆ ತನ್ನ ಹೆಸರನ್ನು ಪರಿಗಣಿಸದಿದ್ದ ಕಾರಣ ಪೂರ್ವವಲಯ ಸೇನಾ ಕಮಾಂಡರ್ ಆಗಿರುವ ಲೆ|ಜ| ಪ್ರವೀಣ್ ಬಕ್ಷಿ ಅಸಮಾಧಾನಗೊಂಡಿದ್ದರು.

ಕಳೆದ ಜ.1 ರಿಂದ ಒಂದು ತಿಂಗಳ ಕಾಲ ರಜೆಯನ್ನು ಕೂಡಾ ತೆಗೆದುಕೊಂಡಿದ್ದರು. ಆದರೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಇಂದು ಕೊಲ್ಕತ್ತಾ ಕಚೇರಿಯಲ್ಲಿ ಲೆ|ಜ| ಬಕ್ಷಿ ಕೆಲಸಕ್ಕೆ ಹಾಜರಾಗಿದ್ದಾರೆ.

ಸಾಮಾನ್ಯವಾಗಿ ಸೇವಾ ಹಿರಿತನದ ಆಧಾರದಲ್ಲಿ ಸೇನಾ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಆದರೆ ಈ ಬಾರಿ, ದಶಕಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ತಿಲಾಂಜಲಿ ಇಟ್ಟು, ಲೆ| ಜ| ಬಿಪಿನ್ ರಾವತ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿತ್ತು.