ಸಬ್ಸಿಡಿ ರಹಿತ ಎಲ್‌ಪಿಜಿ ದರ ಇಳಿಕೆ

LPG Price Down
Highlights

ವಿವಿಧ ರೀತಿಯ ಸರಕುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದು ಗುಡ್  ನ್ಯೂಸ್.

ನವದೆಹಲಿ: ವಿವಿಧ ರೀತಿಯ ಸರಕುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದು ಗುಡ್  ನ್ಯೂಸ್.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಗಗನಕ್ಕೇರಿರುವ ನಡುವೆಯೇ ಕೇಂದ್ರ ಸರ್ಕಾರ, ಸಬ್ಸಿಡಿ ರಹಿತ 14 ಕೆಜಿ ತೂಕದ ಸಿಲಿಂಡರ್‌ ಬೆಲೆಯಲ್ಲಿ 35.50 ರು.ಗಳ ಕಡಿತ ಮಾಡಿದೆ.

ಜೊತೆಗೆ 5 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ 15 ರು. ಅಗ್ಗವಾದರೆ, 19 ಕೆಜಿ ವಾಣಿಜ್ಯ ಸಿಲಿಂಡರ್‌ ಮೇಲೆ 54 ರು. ಕಡಿಮೆಯಾಗಲಿದೆ. ಇದು ಈ ತಿಂಗಳಲ್ಲಿ ಎರಡನೇ ಬಾರಿ ಆಗುತ್ತಿರುವ ದರ ಇಳಿಕೆಯಾಗಿದೆ.

loader