ಮಾಲೀಕನ ಮೇಲೆ ಪ್ರೇಮ : ಮೃತಪಟ್ಟ 4 ತಿಂಗಳಿಂದ ಆಸ್ಪತ್ರೆಯಲ್ಲೆ ಉಳಿದ ಶ್ವಾನ

Loyal dog refuses to leave hospital where his murdered owner died four months ago
Highlights

ಗಾಯಗೊಂಡ ಈತನನ್ನು ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್'ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಸಾಮಾನ್ಯವಾಗಿ ಶ್ವಾನಗಳನ್ನು ವಿಶ್ವಾಸಕ್ಕೆ ಹೆಚ್ಚು ಹೋಲಿಸುತ್ತಾರೆ. ಸ್ವಲ್ಪ ಆಹಾರ ಅಥವಾ ಪ್ರೀತಿ ತೋರಿಸಿದರೆ ವ್ಯಕ್ತಿ ಯಾರಾದರೇನು ಅವರ ಜೊತೆಗೆ ಹೆಚ್ಚು ಸಲಿಗೆ ತೋರಿಸುತ್ತವೆ. ಬ್ರೆಜಿಲ್ ದೇಶದಲ್ಲಿ ಮಾಲೀಕನ ಮೇಲೆ ಶ್ವಾನವೊಂದು ತೋರಿಸಿದ ವಿಶ್ವಾಸ ಎಲ್ಲಡೆ ವೈರಲ್ ಆಗಿದೆ.

ಬ್ರೆಜಿಲ್'ನ ಪಟ್ಟಣದಲ್ಲಿ  59 ವರ್ಷದ ವ್ಯಕ್ತಿಯೊಬ್ಬನನ್ನು ಅಪರಿಚಿತರು ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಈತನನ್ನು ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್'ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈತ ವಿಶ್ವಾಸ ತೋರಿಸಿದ್ದ ನಾಯಿಯೊಂದು ಆಂಬ್ಯುಲೆನ್ಸ್ ಹಿಂದೆಯೇ ಓಡಿ ಆಸ್ಪತ್ರೆಗೆ ಧಾವಿಸಿದೆ.

ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆದರೆ 4 ತಿಂಗಳಿನಿಂದಲೂ ಆಸ್ಪತ್ರೆಯನ್ನು ಬಿಟ್ಟು ಈ ಶ್ವಾನ ಕದಲುತ್ತಿಲ್ಲ. ದ್ವಾರದಲ್ಲಿಯೇ ಕುಳಿತುಕೊಳ್ಳಿತ್ತಿದೆ. ಸ್ವಯಂಸೇವಾ ಸಂಘಟನೆಯೊಂದು ಬೇರೆ ಮನೆಯನ್ನು ಸೇರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂರ್ನಾಲ್ಕು ಕಿ.ಮೀ ದೂರ ಬಿಟ್ಟುಬಂದರೂ ಮತ್ತೆ ಅದೇ ಆಸ್ಪತ್ರೆಗೆ ಬಂದು ಕುಳಿತುಕೊಳ್ಳುತ್ತಿದೆ. ಕನಿಕರ ತೋರಿಸುತ್ತಿರುವ ಅಲ್ಲಿನ ಸಿಬ್ಬಂದಿ ಆಹಾರ ನೀಡುವ ಜೊತೆಗೆ ಚಳಿಯಿಂದ ರಕ್ಷಿಸಿಕೊಳ್ಳಲು ಮೆತ್ತನೆಯ ಹೊದಿಕೆಯನ್ನು ಹಾಸಿದ್ದಾರೆ.

loader