ಜೂನ್ 30ರ ವೇಳೆಗೆ ಅಧೀನ ನ್ಯಾಯಾಲಯಗಳಲ್ಲಿ 21,303 ಹುದ್ದೆಗಳು ತುಂಬಿರಬೇಕಿತ್ತು
ನವದೆಹಲಿ(ಅ.18): ದೇಶದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಮಾತ್ರವೇ ನ್ಯಾಯಾಧೀಶರ ಕೊರತೆಯಿರುವುದಲ್ಲ, ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬಾಗಿರುವ ಅೀನ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರ ತೀವ್ರ ಕೊರತೆ ಎದ್ದುಕಾಣುತ್ತಿದೆ. ದೇಶಾದ್ಯಂತ ಈ ಕೋರ್ಟ್‌ಗಳಲ್ಲಿ 5,111 ಹುದ್ದೆಗಳು ಖಾಲಿಬಿದ್ದಿವೆ ಎಂದು ಕಾನೂನು ಸಚಿವಾಲಯದ ಅಂಕಿಅಂಶಗಳು ತಿಳಿಸಿದೆ. ಜೂನ್ 30ರ ವೇಳೆಗೆ ಅಧೀನ ನ್ಯಾಯಾಲಯಗಳಲ್ಲಿ 21,303 ಹುದ್ದೆಗಳು ತುಂಬಿರಬೇಕಿತ್ತು. ಆದರೆ, 16,192 ನ್ಯಾಯಾಂಗ ಅಕಾರಿಗಳಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, 5,111 ಜಡ್ಜ್‌ಗಳ ಕೊರತೆಯಿದೆ. ಈ ಪೈಕಿ ಅತ್ಯಕ ಅಂದರೆ 794 ಹುದ್ದೆಗಳು ಗುಜರಾತ್‌ನ ಕೋರ್ಟ್‌ಗಳಲ್ಲಿ ಖಾಲಿಬಿದ್ದಿವೆ ಎಂದು ಸಚಿವಾಲಯದ ಅಂಕಿಅಂಶ ತಿಳಿಸಿದೆ.
