ಕಾನ್ಪುರ[ಫೆ.20]  ಕಾನ್ಪುರ- ಭಿವಾನಿ ಕಾಲಿಂದಿ ಎಕ್ಸ್‌ಪ್ರೆಸ್‌ ರೈಲಿನ ಶೌಚಾಲಯದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ.

ಬುಧವಾರ  ಸಂಜೆ 7.10ರ ಸುಮಾರಿಗೆ ಉತ್ತರ ಪ್ರದೇಶದ ಕಾನ್ಪುರ ಸಮೀಪ ರೈಲಿನ ಸಾಮಾನ್ಯ ಕೋಚ್ ನ ಶೌಚಾಲಯಲ್ಲಿ ಸ್ಫೋಟವಾಗಿದೆ. ಮುಂಜಾಗೃತಾ ಕ್ರಮವಾಗಿ ರೈಲು ನಿಲ್ದಾಣ ಮತ್ತು ರೈಲನ್ನು ಭದ್ರತಾ ಪಡೆಗಳು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಮೇಲೆ ದಾಳಿಯಾದ ನಂತರದ ಕೆಲ ದಿನಗಳಲ್ಲಿಯೇ ಇಂಥ ಘಟನೆ ನಡೆದಿರುವುದು ಆತಂಕ ಮೂಡಿಸಿದೆ. ಕೆಲ ಕಾಲ ರೈಲನ್ನು ಪರಿಶೀಲನೆ ನಡೆಸಿ ಮುಂದಕ್ಕೆ ಕಳಿಸಲಾಗಿದೆ.