ಲವ್ ಜಿಹಾದ್ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್ಐಎ) ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವ ಬಹುದೊಡ್ಡ ತಾಣವಾಗಿ ಕೇರಳ ಹೊರಹೊಮ್ಮಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ಎನ್'ಐಎ ಮತ್ತು ಕೇರಳ ಪೊಲೀಸರು ರಹಸ್ಯ ವರದಿ ತಯಾರಿಸಿದ್ದು, ಅದರಲ್ಲಿ ಈ ಆಘಾತಕಾರಿ ಮಾಹಿತಿ ಇದೆ ಎಂದು ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ. ವಿದ್ಯಾವಂತ ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂ ತರ ಮಾಡುವ ದೊಡ್ಡ ಜಾಲವೊಂದು ಕೇರಳ ದಲ್ಲಿ ಕಾರ್ಯನಿರ್ವಹಿಸುತ್ತಿದೆ.
ನವದೆಹಲಿ(ಆ.31): ಲವ್ ಜಿಹಾದ್ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್ಐಎ) ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವ ಬಹುದೊಡ್ಡ ತಾಣವಾಗಿ ಕೇರಳ ಹೊರಹೊಮ್ಮಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ಎನ್'ಐಎ ಮತ್ತು ಕೇರಳ ಪೊಲೀಸರು ರಹಸ್ಯ ವರದಿ ತಯಾರಿಸಿದ್ದು, ಅದರಲ್ಲಿ ಈ ಆಘಾತಕಾರಿ ಮಾಹಿತಿ ಇದೆ ಎಂದು ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ. ವಿದ್ಯಾವಂತ ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂ ತರ ಮಾಡುವ ದೊಡ್ಡ ಜಾಲವೊಂದು ಕೇರಳ ದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದರ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್'ಐ) ಕೈವಾಡವಿದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ. ಹಿಂದು ಯುವತಿಯರನ್ನು ಮತಾಂತರ ಮಾಡಲೆಂದೇ ‘ದವಾ ಸ್ವ್ಕಾಡ್’ಗಳನ್ನು ರಚಿಸಲಾಗಿದೆ. ಈ ತಂಡ ಅರ್ಹ ಯುವತಿಯನ್ನು ಗುರುತಿಸಿ ಅವರನ್ನು ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುತ್ತವೆ. ಪ್ರೀತಿಯ ನಾಟಕವಾಗಿ ಹಿಂದು ಯುವತಿಯನ್ನು ಸೆಳೆಯಲಾಗುತ್ತದೆ. ಬಳಿಕ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ.
ಕಳೆದ 365 ದಿನಗಳ ಅವಧಿಯಲ್ಲಿ ಈ ರೀತಿಯಲ್ಲಿ 105 ಹಿಂದು ಯುವತಿಯನ್ನು ಲವ್ ಜಿಹಾದ್ ಜಾಲಕ್ಕೆ ಬೀಳಿಸಿಕೊಳ್ಳಲಾಗಿದೆ ಎಂದು ಎನ್ ಐಎ ಮತ್ತು ಪೊಲೀಸ್ ವರದಿಗಳು ಹೇಳಿವೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ. ಸೈನಾಬಾ ಎಂಬ ಯುವತಿ, ಹಿಂದು ಯುವತಿಯನ್ನು ಜಾಲಕ್ಕೆ ಬೀಳಿಸುವ ಕೆಲಸದ ನೇತೃತ್ವ ವಹಿಸಿಕೊಂಡಿದ್ದಾಳೆ. ಆಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಾಗವಾದ ಸರ್ಕಾರೇತರ ಸಂಸ್ಥೆಯೊಂ ದರ ಪರವಾಗಿ ಈ ಕೆಲಸ ಮಾಡುತ್ತಿದ್ದಾಳೆ. ಹೀಗೆ ಲವ್ ಜಿಹಾದ್ಗೆ ಸಿಕ್ಕ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದ ಬಳಿಕ ಐಎಸ್ಐ ಉಗ್ರ ಸಂಘಟನೆ ಪ್ರಾಬಲ್ಯ ಹೊಂದಿರುವ ಸಿರಿಯಾಕ್ಕೆ ಕಳುಹಿಸಿಕೊಡುವ ಯೋಜನೆ ಯನ್ನು ಈ ಸಂಘಟನೆಗಳು ರೂಪಿಸಿವೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.
'ಸುದ್ದಿವಾಹಿನಿ ಪ್ರಸಾರ ಮಾಡಿರುವ ವರದಿಯನ್ನು ಕೇರಳದ ನಿವೃತ್ತ ಡಿಜಿಪಿ ಸೇನ್ ಕುಮಾರ್ ಒಪ್ಪಿಕೊಂಡಿದ್ದು, ಕೇರಳದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಅದು ವಾಸ್ತವ ಸಂಗತಿ ಎಂದು ಹೇಳಿದ್ದಾರೆ. ಲವ್ಜಿಹಾದ್ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
