ನ್ಯೂಯಾರ್ಕ್(ಜ.07) ತನ್ನ ಪ್ರೇಮ ನಿವೇದನೆಯನ್ನು ನಿರಾಕರಣೆ ಮಾಡಿದ್ದಕ್ಕೆ ಈ ಮಹಿಳೆ ಪ್ರಿಯಕರನಿಗೆ ಬರೋಬ್ಬರಿ ಒಂದು ಲಕ್ಷದ ಐವತ್ತೊಂಬತ್ತು ಸಾವಿರ ಟೆಕ್ಸ್ಟ್ ಮೆಸೇಜ್ ಕಳಿಸಿದ್ದಾಳೆ.

ಜಾಕ್ವಲಿನ್ ಎಡ್ಸ್ ಸಂದೇಶಗಳ ಸರಮಾಲೆ ಕಳಿಸಿದ ಗಟ್ಟಿಗಿತ್ತಿ. ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 31 ವರ್ಷದ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತ ಬಂದ್..ಏನಿರುತ್ತೇ? ಏನಿರಲ್ಲ?

ಕೇವಲ ಸಂದೇಶ ಕಳಿಸಿದ್ದಲ್ಲದೇ ಮಹಿಳೆ ವ್ಯಕ್ತಿಯ ಮನೆಗೆ ಹಲವಾರು ಸಾರಿ ನುಗ್ಗಿದ್ದರು. ನುಗ್ಗಿ ಮನೆಯ ಬಾತ್ ರೂಂ ಸಹ ಬಳಸಿದ್ದರು.

ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮಹಿಳೆ ಪ್ಲೋರಿಡಾ ಮೂಲದವಳು. ಲಕ್ಷಗಟ್ಟಲೇ ಸಂದೇಶಗಳು ವಿನಂತಿ, ಬೆದರಿಕೆ, ಎಚ್ಚರಿಕೆಯನ್ನು ಒಳಗೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.