ಕೊರಟಗೆರೆ ಕರವೇ ತಾಲೂಕು ಅಧ್ಯಕ್ಷ ಸುಮನ್ ಎಂಬಾತ ಈ ಯುವತಿಯನ್ನ ಪ್ರೀತಿಸಿದ್ದಾನೆ. ಅಲ್ಲದೇ, ಜನವರಿ 8ರಂದು ಬೆಂಗಳೂರಿನ ದಾಸರಹಳ್ಳಿಯ ಮನೆಯೊಂದರಲ್ಲಿ ಸುಮನ್, ಶಬಾನಾಳಿಗೆ ತಾಳಿ ಕಟ್ಟಿದ್ದ. ತಾಳಿ ಕಟ್ಟಿರುವ ದೃಶ್ಯವನ್ನು ಶಬಾನ ವಿಡಿಯೋ ಮಾಡಿಕೊಂಡಿದ್ದಾಳೆ. ಆದರೆ, ತಾಳಿ ಕಟ್ಟಿದ ನಂತರ ಸುಮನ್ ಎಸ್ಕೇಪ್ ಆಗಿದ್ದಾನೆ. ಕೇಳಿದ್ರೆ ನಾನು ಮದುವೆಯಾಗಿಲ್ಲ ಅವಳೇ ನನಗೆ ಬೆದರಿಸಿ ಬಲವಂತಾಗಿ ತಾಳಿ ಕಟ್ಟಿಸಿಕೊಂಡಿದ್ದಾಳೆ ಎಂದು ಹೇಳ್ತಿದ್ದಾನೆ. ಆದರೆ, ಶಬಾನಾ ಮಾತ್ರ ಸುಮನ್ ಮೋಸ ಮಾಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಿಲ್ಲ ಎಂದು ನಾಟಕವಾಡುತ್ತಿದ್ದಾನೆ. ನ್ಯಾಯ ಕೊಡಿಸಿ ಎಂದು ತುಮಕೂರು ಎಸ್‍ಪಿ ಇಶಾಪಂತ್ ಬಳಿ ಮೊರೆ ಹೋಗಿದ್ದಾರೆ.
ತುಮಕೂರು(ಜ.17): ಕರವೇ ತಾಲೂಕು ಅಧ್ಯಕ್ಷನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟಿರುವ ಆರೋಪ ತುಮಕೂರಿನಲ್ಲಿ ಕೇಳಿಬಂದಿದೆ. ತುಮಕೂರಿನ ಕೊರಟಗೆರೆಯ ಆಬರ್ಕಾ ಗ್ರಾಮದ ಶಬಾನ ಮೋಸ ಹೋದ ಯುವತಿ.
ಕೊರಟಗೆರೆ ಕರವೇ ತಾಲೂಕು ಅಧ್ಯಕ್ಷ ಸುಮನ್ ಎಂಬಾತ ಈ ಯುವತಿಯನ್ನ ಪ್ರೀತಿಸಿದ್ದಾನೆ. ಅಲ್ಲದೇ, ಜನವರಿ 8ರಂದು ಬೆಂಗಳೂರಿನ ದಾಸರಹಳ್ಳಿಯ ಮನೆಯೊಂದರಲ್ಲಿ ಸುಮನ್, ಶಬಾನಾಳಿಗೆ ತಾಳಿ ಕಟ್ಟಿದ್ದ. ತಾಳಿ ಕಟ್ಟಿರುವ ದೃಶ್ಯವನ್ನು ಶಬಾನ ವಿಡಿಯೋ ಮಾಡಿಕೊಂಡಿದ್ದಾಳೆ. ಆದರೆ, ತಾಳಿ ಕಟ್ಟಿದ ನಂತರ ಸುಮನ್ ಎಸ್ಕೇಪ್ ಆಗಿದ್ದಾನೆ. ಕೇಳಿದ್ರೆ ನಾನು ಮದುವೆಯಾಗಿಲ್ಲ ಅವಳೇ ನನಗೆ ಬೆದರಿಸಿ ಬಲವಂತಾಗಿ ತಾಳಿ ಕಟ್ಟಿಸಿಕೊಂಡಿದ್ದಾಳೆ ಎಂದು ಹೇಳ್ತಿದ್ದಾನೆ. ಆದರೆ, ಶಬಾನಾ ಮಾತ್ರ ಸುಮನ್ ಮೋಸ ಮಾಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಿಲ್ಲ ಎಂದು ನಾಟಕವಾಡುತ್ತಿದ್ದಾನೆ. ನ್ಯಾಯ ಕೊಡಿಸಿ ಎಂದು ತುಮಕೂರು ಎಸ್ಪಿ ಇಶಾಪಂತ್ ಬಳಿ ಮೊರೆ ಹೋಗಿದ್ದಾರೆ.
