Asianet Suvarna News Asianet Suvarna News

ಕಳೆದುಕೊಂಡಿದ್ದು 5 ಕೋಟಿ, ದೂರು ಕೊಟ್ಟಿದ್ದು ಐದೂವರೆ ಲಕ್ಷಕ್ಕೆ..! 5 ಕೋಟಿ ಕದ್ದಿದ್ದ ನಾಲ್ವರು ಅರೆಸ್ಟ್..!

Lost 5 billion complaints only five and a half lakh

ಬೆಂಗಳೂರು(ಸೆ.24): ಇದು ಬೆಂಗಳೂರಿನಲ್ಲಿ ನಡೆದ ವಿಚಿತ್ರ ದರೋಡೆ ಪ್ರಕರಣವೊಂದು ದಾಖಲಾಗಿದೆ. ದುಡ್ಡು ಕಳೆದುಕೊಂಡಿದ್ದು 5 ಕೋಟಿಯಾದರು, ದೂರು ಕೊಟ್ಟಿದ್ದು ಮಾತ್ರ ಐದೂವರೆ ಲಕ್ಷಕ್ಕೆ. ಆರೋಪಿಗಳನ್ನು ಬಂಧಿಸಿದರು, ಎಫ್ಐಆರ್ ದಾಖಲಾಗಿಲ್ಲ. ಇದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ. 

ಮೂಟೆಯಲ್ಲಿ ಸಾಗಿಸುತ್ತಿದ್ದ 5 ಕೋಟಿ ಕದ್ದಿದ್ದ ನಾಲ್ವರು ಸದ್ಯ ಅರೆಸ್ಟ್ ಆದರೂ ಎಫ್ಐಆರ್ ದಾಖಲಾಗಿರಲಿಲ್ಲ ಯಾಕೆ ..? 5 ಕೋಟಿ ಕಳಕೊಂಡ್ರೂ, ಆತ ಐದೂವರೆ ಲಕ್ಷಕ್ಕೆಷ್ಟೇ ದೂರು ಕೊಟ್ಟಿದ್ದು ಏಕೆ..? 5 ಕೋಟಿ ಕಳೆದುಕೊಂಡಿದ್ದವನು ಯಾರು..? 5 ಕೋಟಿ ಬ್ಲಾಕ್​ ಮನೀನಾ..? ಎಂಬ ಪ್ರಶ್ನೆ ಎದುರಾಗಿದೆ. 

ಇದೇ ತಿಂಗಳು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್​ ಮನೆಯಲ್ಲಿ ಕಳ್ಳತನವಾಗಿತ್ತು, ಅಗ್ರಹಾರ ದಾಸರಹಳ್ಳಿಯ ಮನೆಯಲ್ಲಿ ಮೂಟೆಯಲಿಟ್ಟಿದ್ದ 5 ಕೋಟಿ ಹಣವನ್ನು ಲಪಟಾಯಿಸಲಾಗಿತ್ತು. ಆದರೆ ಅದೇ 16ನೇ ತಾರೀಕು ಲಕ್ಷ್ಮಣ್ ಪುತ್ರ ಪೊಲೀಸರಿಗೆ ಕೇವಲ ಐದೂವರೆ ಲಕ್ಷ ರೂ ಕಳುವಾಗಿದೆ ಎಂದು ದೂರು ಕೊಟ್ಟಿದ್ದರು. 

ಆದರೆ ಈ ಸಂಬಂಧ ಚೇತನ್, ಸುನಿಲ್, ವಾಸು ಸೇರಿ ನಾಲ್ವರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಎಫ್​ಐಆರ್ ದಾಖಲಿಸಿರಲಿಲ್ಲ.  16ನೇ ತಾರೀಕು ಅರೋಪಿಗಳನ್ನು ಬಂಧಿಸಿದರೂ, ಕೋರ್ಟ್​ಗೆ ತೋರಿಸಲಿಲ್ಲ, ಲಕ್ಷ್ಮಣ್ ಸಿಎಂ ಆಪ್ತ ಎಂಬ ಕಾರಣಕ್ಕೇ ಎಫ್​ಐಆರ್ ದಾಖಲಿಸಲಿಲ್ಲ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಸಂಬಂಧಿಕರು, ಮಾನವ ಹಕ್ಕು ಆಯೋಗದ ಮೊರೆ ಹೋದ ನಂತರ ಪೊಲೀಸರು ಎಫ್​ಐಆರ್ ದಾಖಲಿಸಿ. ನಿನ್ನೆ ರಾತ್ರಿ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. 

ಲಕ್ಷ್ಮಣ್, ಸಿಎಂ ಸಿದ್ದರಾಮಯ್ಯ ಪರಮಾಪ್ತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಸಿದ್ದರಾಮಯ್ಯನವರ ವಾಚ್ ಹಗರಣದಲ್ಲೂ ಲಕ್ಷ್ಮಣ್ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಸಿಎಂ ಆಪ್ತ ಎಂಬ ಕಾರಣಕ್ಕೇ, ಪೊಲೀಸರು ಆರೋಪಿಗಳನ್ನು ಬಚ್ಚಿಟ್ಟಿದ್ದರಾ..?ಎಫ್​ಐಆರ್ ಹಾಕದೇ 5 ಕೋಟಿ ರಿಕವರಿ ಮಾಡಲು ಮುಂದಾಗಿದ್ದರಾ..? ಎಂಬ ಪ್ರಶ್ನೆಗಳು ಎದುರಾಗಿದೆ. 

Latest Videos
Follow Us:
Download App:
  • android
  • ios