ಶ್ರೀರಾಮ ಕನಸಿನಲ್ಲಿ ಬಂದು ಹೇಳಿದ್ದಕ್ಕೆ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರವಾಗಿದೆ.
ಲಕ್ನೋ : ಶ್ರೀ ರಾಮ ಕನಸಿನಲ್ಲಿ ಬರುತ್ತಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಶಾಮಿಲಿ ನಗರದ ಶಹಜಾದ್ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾಗಿ ಹೆಸರನ್ನು ಸಂಜು ರಾಣಾ ಎಂದು ಬದಲಾಯಿಸಿಕೊಂಡಿದ್ದಾರೆ.
ನಮ್ಮ ಪೂರ್ವಜರು ಹಿಂದುಗಳಾಗಿದ್ದ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಕಳೆದ 15 - 20 ದಿನಗಳಿಂದ ಶ್ರೀರಾಮ ನನ್ನ ಕನಸಿನಲ್ಲಿ ಬಂದು ಈ ಬಗ್ಗೆ ಹೇಳುತ್ತಿದ್ದರು ಈ ನಿಟ್ಟಿನಲ್ಲಿ ಮರಳಿ ಹಿಂದೂ ಧರ್ಮಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.
ಅಲ್ಲದೇ ನಮಗೆ ಯಾರೂ ಕೂಡ ಹಿಂದೂ ಧರ್ಮವನ್ನು ಸ್ವೀಕಾರ ಮಾಡಲು ಒತ್ತಾಯ ಮಾಡಲಿಲ್ಲ. ಯಾವುದೇ ಒತ್ತಡಕ್ಕೂ ಒಳಗಾಗದೇ ತಾವು ಸ್ವ ಇಚ್ಛೆಯಿಂದ ಧರ್ಮ ಸ್ವೀಕಾರ ಮಾಡಿದ್ದಾಗಿ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 2:04 PM IST