ಚಿಕ್ಕರಾಯಪ್ಪ ಮನೆ ಮೆಲೆ ಐಟಿ ದಾಳಿಗೆ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದೆ. ಆದರೆ ಭ್ರಷ್ಟ ಅಧಿಕಾರಿಗಳ ಚಿಕ್ಕರಾಯಪ್ಪ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಜಾರಿ ನಿರ್ದೇಶನಾಲಯ ಇವರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದು, ಚಿಕ್ಕರಾಯಪಗಪ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಯಾಗಿದೆ.

ಬೆಂಗಳೂರು(ಡಿ.23): ಚಿಕ್ಕರಾಯಪ್ಪ ಮನೆ ಮೆಲೆ ಐಟಿ ದಾಳಿಗೆ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದೆ. ಆದರೆ ಭ್ರಷ್ಟ ಅಧಿಕಾರಿಗಳ ಚಿಕ್ಕರಾಯಪ್ಪ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಜಾರಿ ನಿರ್ದೇಶನಾಲಯ ಇವರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದು, ಚಿಕ್ಕರಾಯಪ್ಪ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಯಾಗಿದೆ.

ಚಿಕ್ಕರಾಯಪ್ಪ ವಿರುದ್ಧ ಇಡಿ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದು, ಸದ್ಯ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚಿಕ್ಕರಾಯಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಅಧಿಕಾರಿಗಳಿಗೆ ಚಿಕ್ಕರಾಯಪ್ಪ ವಿರುದ್ಧದ ಲುಕ್ ಔಟ್ ನೋಟೀಸ್ ಕಳುಹಿಸಿರುವ ಇಡಿ ಅಧಿಕಾರಿಗಳು ಪೊಲೀಸ್ ಇಲಾಖೆಗೂ ಈ ಕುರಿತಾಗಿ ಮಾಹಿತಿ ಸಿಕ್ಕರೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕರಾಯಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಅಪಾರ ಮೌಲ್ಯದ ಹಣ ಹಾಗೂ ಸಂಪತ್ತನ್ನು ವಶಪಡಿಸಿಕೊಂಡಿದ್ದರು. ದಾಳಿಯ ಬಳಿಕ ಚಿಕ್ಕರಾಯಪ್ಪ ತಲೆ ಮರೆಸಿಕೊಂಡಿದ್ದರು. ಇವರಿಗಾಗಿ ತೀವ್ರ ಶೋಧ ನಡೆಸಿದ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಲುಕ್ ಔಟ್ ನೋಟೀಸ್ ಜಾರಿಗೊಳಿಸಲಾಗಿದೆ.