Asianet Suvarna News Asianet Suvarna News

ಎಲೆಕ್ಷನ್ ಸ್ವಾರಸ್ಯ: 6 ವಿವಿಧ ಕ್ಷೇತ್ರಗಳಲ್ಲಿ ಗೆದ್ದಿದ್ದ ವಾಜಪೇಯಿ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಚುನಾವಣಾ ಇತಿಹಾಸದಲ್ಲಿ ನಿಮಗೆ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

Loksabha Elections 2019 Vajpayee Won From 6 Different Constituencies
Author
Bangalore, First Published Mar 7, 2019, 3:56 PM IST

6 ವಿವಿಧ ಕ್ಷೇತ್ರಗಳಲ್ಲಿ ಗೆದ್ದಿದ್ದ ವಾಜಪೇಯಿ:

6 ವಿವಿಧ ಲೋಕಸಭಾ ಕ್ಷೇತ್ರಗಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಏಕೈಕ ರಾಜಕಾರಿಣಿಯೆಂದರೆ ಅಟಲ್ ಬಿಹಾರಿ ವಾಜಪೇಯಿ. 1957, 67ರಲ್ಲಿ ಬಲರಾಮ್‌ಪುರದಿಂದ, 71ರಲ್ಲಿ ಗ್ವಾಲಿಯರ್‌ನಿಂದ, 77,80ರಲ್ಲಿ ನವದೆಹಲಿ ಯಿಂದ, 91ರಲ್ಲಿ ವಿದಿಷಾದಿಂದ, 96ರಲ್ಲಿ ಗಾಂಧಿನಗರದಿಂದ, 91, 96, 98ರಲ್ಲಿ ಲಖನೌದಿಂದ ಗೆದಿದ್ದರು.

62 ವರ್ಷಗಳಿಂದ ಎಲೆಕ್ಷನ್ ನಿಲ್ಲೋದೆ ಕಾಯಕ: ಪ್ರಜೆಗಳ ಪ್ರಭುವಾಗದ ಶ್ಯಾಂ ಬಾಬು!

ಒಬ್ಬೊಬ್ಬ ಅಭ್ಯರ್ಥಿಗೆ ಒಂದೊಂದು ಮತಪೆಟ್ಟಿಗೆ

1951ರ ಚುನಾವಣೆಯಲ್ಲಿ ಒಬ್ಬೊಬ್ಬ ಅಭ್ಯರ್ಥಿಗೆ ಒಂದೊಂದು ಮತಪೆಟ್ಟಿಗೆಯನ್ನು ನೀಡಲಾಗಿತ್ತು. ಒಂದೊಂದು ಪಕ್ಷಕ್ಕೂ ಬೇರೆ ಬೇರೆ ಬಣ್ಣದ ಮತಪೆಟ್ಟಿಗೆ ಇದ್ದವು. ಇದರಿಂದಾಗಿ ಯಾರಿಗೆ ಹೆಚ್ಚು ಮತ ಲಭಿಸಿದೆ ಎಂಬುದು ಮತದಾದನ ವೇಳೆಯೇ ಗೊತ್ತಾಗುತ್ತಿತ್ತು.

1,96,084

ಮೊದಲ ಚುನಾವಣೆಯಲ್ಲಿ ದೇಶಾದ್ಯಂತ 1.96 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 27527 ಮತಗಟ್ಟೆಗಳು ಮಹಿಳೆಯರಿಗೇ ಮೀಸಲಾಗಿದ್ದವು. ಆಗ ಇದ್ದ ಒಟ್ಟು ಮತದಾರರ ಸಂಖ್ಯೆ 17 ಕೋಟಿ.

Follow Us:
Download App:
  • android
  • ios