ನವದೆಹಲಿ[ಮೇ. 30] ನರೇಂದ್ರ ಮೋದಿ ಎಂದು ಹೆಸರಿಟ್ಟಿದ್ದ ಮುಸ್ಲಿಂ ಕುಟುಂಬ ಒತ್ತಡಕ್ಕೆ ಒಳಗಾಗಿ ಮೊಹಮದ್ ಅಲ್ತಾಬ್ ಅಲಾಂ ಮೋದಿ ಎಂದು ಬದಲಾಯಿಸಬೇಕಾಗಿ ಬಂದಿದೆ.

ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಲ್ಲೇ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಮಗನಿಗೆ ನರೇಂದ್ರ ಮೋದಿ ಅಂಥ ನಾಮಕರಣ ಮಾಡಿದ್ದರು.

ಉತ್ತರ ಪ್ರದೇಶ ಪರ್ಸಾಪುರ್ ಮಹ್ರೌರ್ ಗ್ರಾಮದ ನಿವಾಸಿ ಮೈನಾಜ್ ಬೇಗಂ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದರು. ಇದಕ್ಕೂ ಮುನ್ನ ದುಬೈನಲ್ಲಿರುವ ಆಕೆ ಪತಿಗೆ ಕರೆ ಮಾಡಿದಾಗ ನರೇಂದ್ರ ಮೋದಿ ಗೆದ್ರಾ ಅಂಥ ಕೇಳಿದರಂತೆ. ಹಾಗಾಗಿ ಆ ಮಹಿಳೆ ಮೋದಿ ಹೆಸರಿಡೋ ತೀರ್ಮಾನಕ್ಕೆ ಬಂದರಂತೆ.

ಲೋಕಸಭಾ ಚುನಾವಣೆ ರಿಸಲ್ಟ್ ದಿನ ಜನಿಸಿದ ಮಗುವಿಗೆ 'ನರೇಂದ್ರ ಮೋದಿ'ಹೆಸರಿಟ್ಟ ಮುಸ್ಲಿಂ ಕುಟುಂಬ

ಲೋಕಸಭೆಯ ಫಲಿತಾಂಶ ಪ್ರಕಟವಾದ ದಿನವೇ ಮೈನಾಜ್ ಬೇಗಂ ಹೆಸರಿಡಲು ತೀರ್ಮಾನಿಸಿದ್ದರು. ಇದಕ್ಕೆ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ ಮೈನಾಜ್ ಬೇಗಂ ನಿರ್ಧಾರ ಬದಲಿಸಲಿಲ್ಲ.  ಆದರೆ ಈಗ ಒತ್ತಡ ಕೇಳಿಬಂದಿರುವುದರಿಂದ  ಬೇಡದ ರಿಸ್ಕ್ ಮೈಮೇಲೆ ಎಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತಾಯಿ ಹೆಸರು ಬದಲಾವಣೆಗೆ ತೀರ್ಮಾನ ಮಾಡಿದ್ದಾರೆ.