ವಾಷಿಂಗ್ಟನ್‌ (ಫೆ. 23):  ನರೇಂದ್ರ ಮೋದಿ ವರ್ಸ್‌ಸ್‌ ಇತರರು ಎಂಬ ಕದನ ರೂಪ ಪಡೆದಿರುವ ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಇತಿಹಾಸದಲ್ಲಿ ಅಷ್ಟೇ ಅಲ್ಲ, ವಿಶ್ವದ ಇತಿಹಾಸದಲ್ಲೇ ಅತ್ಯಂತ ದುಬಾರಿ ಚುನಾವಣೆಯಾಗಿ ದಾಖಲಾಗಬಹುದು ಎಂದು ಅಮೆರಿಕದ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಹಾಗೂ ಸಂಸತ್ತಿನ ಚುನಾವಣೆಗೆ 6.5 ಬಿಲಿಯನ್‌ ಡಾಲರ್‌ (46 ಸಾವಿರ ಕೋಟಿ ರು.) ವೆಚ್ಚವಾಗಿತ್ತು. ಆದರೆ ಅದಕ್ಕೂ ಎರಡು ವರ್ಷ ಮುಂಚೆ ನಡೆದ ಭಾರತದ ಲೋಕಸಭೆ ಚುನಾವಣೆಗೆ 5 ಬಿಲಿಯನ್‌ ಡಾಲರ್‌ (35 ಸಾವಿರ ಕೋಟಿ ರು.) ಖರ್ಚಾಗಿತ್ತು. 2019ರಲ್ಲಿ ನಡೆಯಲಿರುವ ಲೋಕಸಭೆ ಮಹಾಸಮರ ಅಮೆರಿಕ ಚುನಾವಣೆಯ ವೆಚ್ಚವನ್ನು ಸುಲಭವಾಗಿ ಹಿಂದಿಕ್ಕಲಿದೆ ಎಂದು ಅಮೆರಿಕದ ತಜ್ಞ ಮಿಲನ್‌ ವೈಷ್ಣವ್‌ ತಿಳಿಸಿದ್ದಾರೆ.