ನವದೆಹಲಿ: ಕರ್ನಾಟಕದಲ್ಲಿ ಈಗಲೇ ಲೋಕಸಭೆ ಚುನಾವಣೆ ನಡೆದು ಜೆಡಿಎಸ್‌-ಕಾಂಗ್ರೆಸ್‌ ಒಗ್ಗಟ್ಟಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಹೊಡೆತ ಬೀಳಲಿದ್ದು, ದೋಸ್ತಿಗಳಿಗೆ 17 ಸ್ಥಾನಗಳು ಲಭಿಸಲಿವೆ ಎಂದು ವಿಡಿಪಿ ಅಸೋಸಿಯೇಟ್ಸ್‌ ನಡೆಸಿದ ಸಮೀಕ್ಷೆ ಹೇಳಿದೆ. 

ರಾಜ್ಯದ 28 ಕ್ಷೇತ್ರಗಳಲ್ಲಿ 13 ಕಾಂಗ್ರೆಸ್‌ ಹಾಗೂ ಮಿತ್ರಪಕ್ಷ ಜೆಡಿಎಸ್‌ 4 ಸ್ಥಾನಗಳಲ್ಲಿ ಗೆಲ್ಲಲಿವೆ. ಬಿಜೆಪಿ ಬಲ 11 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 9, ಜೆಡಿಎಸ್‌ 2 ಹಾಗೂ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಶೇಕಡಾವಾರು ಮತದಲ್ಲಿ ಕಾಂಗ್ರೆಸ್‌ 35, ಜೆಡಿಎಸ್‌ 14.3 ಮತಗಳನ್ನು ಪಡೆಯಲಿದ್ದು ಒಟ್ಟಾರೆ ಶೇ.49.3 ಮತ ಪಡೆಯಲಿವೆ. ಬಿಜೆಪಿ ಶೇ.41.5 ಮತ ಗಳಿಸಲಿವೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಜನಪ್ರಿಯ ಪಿಎಂ ಅಭ್ಯರ್ಥಿ

ಮೋದಿ: ಶೇ.42

ರಾಹುಲ್‌: ಶೇ.35