‘3ನೇ ಸ್ಥಾನಿ ಜೆಡಿಎಸ್ ಗೆ ಬಿಟ್ಕೊಡ್ಬೇಕಾ? ದುಸ್ಸಾಹಸ ಮಾಡೋಕಾಗಲ್ಲ’
ದೋಸ್ತಿಗಳ ನಡುವೆ ಮಂಡ್ಯ ಮತ್ತು ಮೈಸೂರು ಟಿಕೆಟ್ ಕುರಿತಾಗಿ ಗೊಂದಲಗಳು ಮುಂದುವರಿದಿರುವ ಸಂದರ್ಭದಲ್ಲಿಯೇ ಮತ್ತೊಂದು ಕ್ಷೇತ್ರ ಅದೇ ಸಾಲಿಗೆ ಸೇರಿದೆ.
ಚಿಕ್ಕಬಳ್ಳಾಪುರ[ಮಾ.05] ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆಯೂ ಜೆಡಿಎಸ್ ಕಣ್ಣಿಟ್ಟಿದೆ. ಗೆಲ್ಲುವ ಮಾನದಂಡ ತೆಗೆದುಕೊಂಡರೆ ಜೆಡಿಎಸ್ ಇಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ಎಲ್ಲಾ ಚುನಾವಣೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಒಮ್ಮೆ ಮಾತ್ರ ಜೆಡಿಎಸ್ ಗೆದ್ದಿದೆ ಅಷ್ಟೆ ಎಂದು ಚಿಕ್ಕಬಳ್ಳಾಪುರ ಸಂಸದ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
1996 ರಲ್ಲಿ ಜನತಾದಳದಿಂದ ಆರ್. ಎಲ್.ಜಾಲಪ್ಪ ಗೆದ್ದಿದ್ದು ಬಿಟ್ರೆ ಮತ್ತೆ ಗೆಲ್ಲಲೇ ಇಲ್ಲ. ಹಿಂದುಳಿದವರು, ಅಲ್ಪಸಂಖ್ಯಾತರರು ಹೆಚ್ಚಾಗಿ ಇರೋ ಕ್ಷೇತ್ರ ಇದು. ಹೀಗಾಗಿ ಇಂತಹ ಕ್ಷೇತ್ರವನ್ನು ಒಮ್ಮೆಲೆ ಜೆಡಿಎಸ್ ಹೇಗೆ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಮೊಯ್ಲಿ ಪ್ರಶ್ನೆ ಮಾಡಿದರು.
ಯಾವ ರೀತಿಯಲ್ಲಿ ಇಲ್ಲಿ ಜೆಡಿಎಸ್ ಗೆಲ್ಲಲು ಸಾಧ್ಯ ಅನ್ನುವುದನ್ನು ಮೊದಲು ಯೋಚಿಸಬೇಕು. ನಮ್ಮ ಗುರಿ ಇರೋದು ಬಿಜೆಪಿಯನ್ನು ಸೋಲಿಸುವುದು ಅಷ್ಟೇ. ಸಾಹಸ ಮಾಡಬಹುದು ಆದರೆ ದುಸ್ಸಾಹಸ ಮಾಡಲು ಆಗಲ್ಲ ಎಂದರು.
ಮಂಡ್ಯದಲ್ಲಿ ಅಂಬರೀಶ್ ಎಂದ್ರೆ ಹೆಚ್ಚು ಪ್ರಚಲಿತ. ಜನರು ಅಂಬರೀಶ್ ನೆನಪು ಸದಾ ಇರಲಿ ಎಂದು ಸುಮಲತಾ ಸ್ಪರ್ಧೆಗೆ ಬೇಡಿಕೆ ಮಾಡುತ್ತಿದ್ದಾರೆ. ಅದು ಅಭಿಮಾನಿಗಳ ತಪ್ಪಲ್ಲಾ. ಆದ್ರೆ ಕೊನೆಯದಾಗಿ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತೊ ಕಾದು ನೋಡಬೇಕು ಎಂದು ಹೇಳಿದರು.