15 ವರ್ಷದ ಬಳಿಕ ಮೊದಲ ಬಾರಿಗೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ ಬಿಜೆಪಿ ಅತೀ ಹೆಚ್ಚು ಸ್ಥಾನ ಹೊಂದಿರುವುದರಿಂದ ಅವಿಶ್ವಾಸ ನಿರ್ಣಯದಲ್ಲಿ ಗೆಲುವಿನ ವಿಶ್ವಾಸ
ನವದೆಹಲಿ[ಜು.19]: ನಾಳಿನ ಲೋಕಸಭಾ ಕಲಾಪದಲ್ಲಿ ಕೇಂದ್ರಕ್ಕೆ ಒಂದು ರೀತಿಯ ಅಗ್ನಿ ಪರೀಕ್ಷೆ. ಯಾಕಂದರೆ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಇದಕ್ಕೆ ಸ್ಪೀಕರ್ ಕೂಡ ಅವಕಾಶ ಕೊಟ್ಟಿದ್ದು, ನಾಳಿನ ಕಲಾಪ ತೀವ್ರ ಕುತೂಹಲ ಮೂಡಿಸಿದೆ.
ವಿಪಕ್ಷಗಳು ಮೋದಿ ಸರ್ವಾಧಿಕಾರಿ, ತನ್ನ ಮಾತೇ ನಡೆಯಬೇಕೆನ್ನುತ್ತಾರೆ. ವಿರೋಧ ಪಕ್ಷಗಳನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಅಂತಲೇ ದೂರುತ್ತಾ ಬಂದಿದ್ದವು. ಯಾರಿಗೂ ಕ್ಯಾರೇ ಅನ್ನದೇ ಆನೆ ನಡೆದದ್ದೇ ಹಾದಿ ಎಂದು ನಾಲ್ಕೂವರೆ ವರ್ಷ ದೇಶವನ್ನು ಆಳಿದ ಮೋದಿಗೆ ಇದೀಗ ಮೊದಲ ಅಗ್ನಿ ಪರೀಕ್ಷೆ ಎದುರಾಗಿದೆ. ಸದನದಲ್ಲಿ ಓದಿ ನಾಳೆ ಅವಿಶ್ವಾಸ ಗೊತ್ತುವಳಿ ಎದುರಿಸಲಿದ್ದಾರೆ.
15 ವರ್ಷದ ಬಳಿಕ ಮೊದಲ ಬಾರಿಗೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ. ಅವಿಶ್ವಾಸ ಮಂಡನೆಗೆ ಮಾಡಿದರೂ ಮೋದಿ ಯಾವುದೇ ಗೊಂದಲಕ್ಕೆ ಒಳಗಾದಂತೆ ಕಾಣುತ್ತಿಲ್ಲ. ಬಿಜೆಪಿ ಅತೀ ಹೆಚ್ಚು ಸ್ಥಾನ ಹೊಂದಿರುವುದರಿಂದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತೆ ಅನ್ನೋ ಅಚಲ ವಿಶ್ವಾಸದದಲ್ಲಿದೆ ಕೇಮದ್ರ ಸರ್ಕಾರ.
ಲೋಕ ಸಮರದ ಲೆಕ್ಕಾಚಾರ
ಲೋಕಸಭೆ ಒಟ್ಟು ಸ್ಥಾನ : 543
ಹಾಲಿ ಲೋಕಸಭೆ ಬಲ : 536
ಗೊತ್ತುವಳಿ ಪಾಸಾಗಲು ಮ್ಯಾಜಿಕ್ ನಂ: 268
ಇನ್ನು ಲೋಕಸಭಾ ಸಮರದ ಲೆಕ್ಕಾಚಾರವನ್ನ ನೋಡುವುದಾದರೆ, ಲೋಕಸಭೆಯಲ್ಲಿ ಒಟ್ಟು 543 ಸ್ಥಾನಗಳಿದ್ದು, ಸದ್ಯ ಹಾಲಿ ಲೋಕಸಭಾ ಬಲ 536 ಇದೆ. ಇನ್ನು ಸಂಖ್ಯಾಬಲ ಗೊತ್ತುವಳಿಯಲ್ಲಿ ಅರ್ಹರಾಗಲು ಮ್ಯಾಜಿಕ್ ನಂ. 268 ಬೇಕಿದೆ.
ಎನ್ಡಿಎ V/S ಪ್ರತಿಪಕ್ಷಗಳು
ಹಾಲಿ ಲೋಕಸಭೆಯ ಸ್ಥಾನ ಬಲ : 536
ಮ್ಯಾಜಿಕ್ ನಂಬರ್ : 268
ಎನ್ಡಿಎ ಪರ : 295
ಅವಿಶ್ವಾಸ ಗೊತ್ತುವಳಿ ಪರ : 132
ಕಾಂಗ್ರೆಸಿಗೆ ಕೊರತೆಯಾಗುವ ಮತ : 136
ಇನ್ನು ಲೋಕಸಭೆಯಲ್ಲಿ ಎನ್ಡಿಎ ಪರ 295 ಸಂಖ್ಯಾಬಲವಿದ್ದು, ಅವಿಶ್ವಾಸ ಗೊತ್ತುವಳಿ ಪರ 132 ಸಂಖ್ಯಾಬಲವಿದೆ. ಹೀಗಾಗಿ 136 ಮತಗಳು ಕಾಂಗ್ರೆಸಿಗೆ ಕೊರತೆಯಾಗಲಿವೆ. ಇನ್ನುಳಿದ ಸದಸ್ಯರು ತಟಸ್ಥವಾಗಿದ್ದಾರೆ.
ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೆ ಈ ಅವಿಶ್ವಾಸ ನಿರ್ಣಯವನ್ನು ಪ್ಲಾಟ್ಪಾರ್ಮ್ ಆಗಿ ಬಳಸಿಕೊಳ್ಳುತ್ತಿದೆ. ಯಾವೆಲ್ಲ ಪಕ್ಷಗಳು ತಮ್ಮ ಪರವಾಗಿದೆ ಅನ್ನೋದನ್ನು ಕಂಡುಕೊಳ್ಳಲು ಇದೊಂದು ವೇದಿಕೆ. ಆದರೆ ನಿಜವಾಗಿ ಅಗ್ನಿ ಪರೀಕ್ಷೆ ವಿರೋಧ ಪಕ್ಷಗಳಿಗೆ. ಮುಂದಿನ ಚುನಾವಣೆಗೆ ಮಹಾಘಟಬಂಧನಕ್ಕೆ ಸಿದ್ಧವಾಗುತ್ತಿರುವ ಪ್ರತಿಪಕ್ಷಕ್ಕೆ ಯಾರೆಲ್ಲಾ ಸಾಥ್ ನೀಡ್ತಾರೆ ಅನ್ನೋದು ನಾಳೆ ಬಹುತೇಕ ಗೊತ್ತಾಗಲಿದೆ.
