ಮೀಸಲಾತಿಯಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಹಳ್ಳಿಗಳಲ್ಲೂ ಮೀಸಲಾತಿಯ ಬಗ್ಗೆ ಯೋಚನೆ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯವಾಗಬಹುದು ಎಂದು ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.

ರಾಂಚಿ[ಅ.02]: ಅನಿರ್ದಿಷ್ಟಾವಧಿ ಸಮಯದವರೆಗೆ ಮೀಸಲು ಸೌಲಭ್ಯ ವಿಸ್ತರಣೆಗೊಳ್ಳುತ್ತಿರುವ ಬಗ್ಗೆ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಪ್ರಶ್ನೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಮಿತ್ರಾ, ‘ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರಲು 10 ವರ್ಷ ಮೀಸಲಿನ ಅಗತ್ಯವಿದೆ ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಸ್ವತಃ ಹೇಳಿದ್ದರು. 10 ವರ್ಷದೊಳಗೆ ಸಮಾನತೆ ಸಾಧಿಸಬೇಕೆಂದು ಅವರು ಬಯಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾದರೆ, ನಾವು ಇಂದು ಏನು ಮಾಡುತ್ತಿದ್ದೇವೆ? ನಾವು ಮೀಸಲಾತಿಯನ್ನು ಪ್ರತಿ 10 ವರ್ಷಗಳಿಗೊಮ್ಮೆ ವಿಸ್ತರಿಸುತ್ತಿದ್ದೇವೆ. ಒಂದು ಹಂತದಲ್ಲಿ 20 ವರ್ಷ ವಿಸ್ತರಿಸಲಾಗಿತ್ತು. ಆದರೆ, ಮೀಸಲಾತಿ ಸಮಾಜದಲ್ಲಿ ಸುಧಾರಣೆ ತಂದಿದೆಯೇ’ ಎಂದು ಸುಮಿತ್ರಾ ಪ್ರಶ್ನಿಸಿದ್ದಾರೆ.

ಮೀಸಲಾತಿಯಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಹಳ್ಳಿಗಳಲ್ಲೂ ಮೀಸಲಾತಿಯ ಬಗ್ಗೆ ಯೋಚನೆ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯವಾಗಬಹುದು ಎಂದು ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.