ಈ ಮಸೂದೆ ಅನುಮೋದನೆಯಿಂದ ಮಧ್ಯಮಾವಧಿ ಹೈಬ್ರಿಡ್ ರೂಪಾಂತರಗಳ ಹಾಗೂ ಐಷಾರಾಮಿ ವಾಹನಗಳು ಮೇಲಿನ ಸೆಸ್ ಶೇ.25 ಹೆಚ್ಚಳವಾಗಲಿದೆ.

ನವದೆಹಲಿ(ಡಿ.27): ಐಷಾರಾಮಿ ಕಾರುಗಳ ಜಿಎಸ್'ಟಿಯ ಸೆಸ್''ಅನ್ನು ಶೇ.15 ರಿಂದ ಶೇ.25ಕ್ಕೆ ಹೆಚ್ಚಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದೆ.

ರಾಜ್ಯಗಳ ಆದಾಯ ನಷ್ಟಗಳನ್ನು ಸರಿದೂಗಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಜಿಎಸ್'ಟಿಯ ತಿದ್ದುಪಡಿ ಮಸೂದೆ(ರಾಜ್ಯಗಳಿಗೆ ಪರಿಹಾರ) 2017ರ ಮಸೂದೆಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಯ ಬಗ್ಗೆ ನಡೆಯುತ್ತಿದ್ದ ವಿರೋಧ ಪಕ್ಷದವರು ನಡೆಸುತ್ತಿದ್ದ ಗದ್ದಲದ ನಡುವೆ ಅನುಮೋದಿಸಲಾಯಿತು.

ಈ ಮಸೂದೆ ಅನುಮೋದನೆಯಿಂದ ಮಧ್ಯಮಾವಧಿ ಹೈಬ್ರಿಡ್ ರೂಪಾಂತರಗಳ ಹಾಗೂ ಐಷಾರಾಮಿ ವಾಹನಗಳು ಮೇಲಿನ ಸೆಸ್ ಶೇ.25 ಹೆಚ್ಚಳವಾಗಲಿದೆ. ಮೊದಲಿನ ತೆರಿಗೆಯಂತೆ ಐಷಾರಾಮಿ ಕಾರುಗಳಿಗೆ ಶೇ.15 ಜಿಎಸ್'ಟಿ ವಿಧಿಸಲಾಗುತ್ತಿತ್ತು. ಇದರಿಂದ ತಮಗೆ ನಷ್ಟವಾಗುವುದಾಗಿ ರಾಜ್ಯ ಸರ್ಕಾರಗಳು ತಗಾದೆ ತೆಗೆದಿದ್ದವು. ಈ ಕಾರಣದಿಂದ ನೂತನ ಮಸೂದೆಯನ್ನು ಅನುಮೋದಿಸಲಾಗಿದೆ.