Asianet Suvarna News Asianet Suvarna News

ಲೋಕಸಭೆ ಸದಸ್ಯರಿಗೆ ಹೊಸ ನಿಯಮ

ಇನ್ನು ಲೋಕಸಭೆ ಸದಸ್ಯರು ಇದೀಗ ಹೊಸದಾದ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಲೋಕಸಭಾ ಸದಸ್ಯರು ಇದುವರೆಗೆ 10 ಪ್ರಶ್ನೆ ಕೇಳಲು ಇದ್ದ ಅವಕಾಶ ಕಡಿತಗೊಳಿಸಿ 5 ಪ್ರಶ್ನೆ ಕೇಳಲು ಮಾತ್ರವೇ ಅವಕಾಶ ಒದಗಿಸಲಾಗಿದೆ. 
 

Lok Sabha MPs can ask only 5 questions per day

ನವದೆಹಲಿ: ಇನ್ನು ಲೋಕಸಭೆ ಸದಸ್ಯರು ಒಂದು ದಿನಕ್ಕೆ ಕೇವಲ 5 ಪ್ರಶ್ನೆಗಳನ್ನು ಮಾತ್ರ ಕೇಳಲು ಸಾಧ್ಯ. ಶೀಘ್ರದಲ್ಲೇ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. 

ದಿನಕ್ಕೆ ಈವರೆಗೆ 10 ಪ್ರಶ್ನೆಗಳನ್ನು ಕೇಳಲು ಅವಕಾಶವಿತ್ತು. ಆದರೆ ನಿಯಮವನ್ನು ನಿಯಮ 10ಬಿ ಅನ್ವಯ ಬದಲಿಸಲಾಗಿದ್ದು, ದಿನಕ್ಕೆ 10ರ ಬದಲು 5 ಪ್ರಶ್ನೆಗಳನ್ನು ಕೇಳಲು ಮಾತ್ರ ನೋಟಿಸ್‌ ನೀಡಬಹುದು ಎಂದು ತಿಳಿಸಲಾಗಿದೆ. ದಿನಕ್ಕೆ 10 ಪ್ರಶ್ನೆ ಕೇಳಲು ಅವಕಾಶವಿರುತ್ತಿದ್ದ ಕಾರಣ ನಿತ್ಯ 230 ಪ್ರಶ್ನೆಗಳನ್ನು (ಸರಾಸರಿ) ಕೇಳಲಾಗುತ್ತಿತ್ತು. 

ಇದು ತುಂಬಾ ಹೊರೆ ಎನ್ನಿಸುತ್ತಿತ್ತು. ಹೀಗಾಗಿ 5 ಪ್ರಶ್ನೆಗೆ ಮಿತಿ ಸೀಮಿತ ಮಾಡಲಾಗಿದೆ. ಒಂದು ವೇಳೆ ಪ್ರಶ್ನೆ ಕೇಳಿದ ದಿನ ಉತ್ತರ ಲಭಿಸದಿದ್ದರೆ ಮಾರನೇ ದಿವಸ ಉತ್ತರ ಲಭಿಸಲಿದೆ.

Follow Us:
Download App:
  • android
  • ios