ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿದ್ದ ಒಡಿಶಾದ ಬಿಜೆಡಿ ಸಂಸದ ಬೈಜಯಂತ್‌ ಪಾಂಡಾ, ಸೋಮವಾರ ಬಿಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.  

ಭುವನೇಶ್ವರ: ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿದ್ದ ಒಡಿಶಾದ ಬಿಜೆಡಿ ಸಂಸದ ಬೈಜಯಂತ್‌ ಪಾಂಡಾ, ಸೋಮವಾರ ಬಿಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 

ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ಗೆ ಪತ್ರ ಬರೆದಿರುವ ಪಾಂಡಾ, ‘ತಮ್ಮ ತಂದೆ ಬನ್ಸಿದಾರ್‌ ಪಾಂಡಾರ ಅಂತ್ಯಸಂಸ್ಕಾರಕ್ಕೆ ಆಡಳಿತ ಪಕ್ಷದ ಒಬ್ಬರೇ ಒಬ್ಬರು ಸದಸ್ಯರು ಭಾಗಿಯಾಗಿಲ್ಲದಿರುವುದು ತೀವ್ರ ನೋವು ಮತ್ತು ಅಸಮಾಧಾನವನ್ನುಂಟುಮಾಡಿದೆ. 

ಹಾಗಾಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜ.24 ರಂದು ಪಾಂಡಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು.