ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಚುನಾವಣೆ..?

Lok Sabha And  Assembly ElectionsMay be held simultaneously
Highlights

ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಕೂಡ ಚುನಾವಣೆ ನಡೆಸುವ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದೆ. ಇನ್ನು ದೇಶದಲ್ಲಿ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು ಎಂಬ ಸಾಧ್ಯ-ಸಾಧ್ಯತೆಯ ಕುರಿತು ಚರ್ಚಿಸಲು ಕಾನೂನು ಆಯೋಗ ಕರೆದ ಸಭೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಗೈರಾಗಿದ್ದವು.

ನವದೆಹಲಿ: ದೇಶದಲ್ಲಿ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು ಎಂಬ ಸಾಧ್ಯ-ಸಾಧ್ಯತೆಯ ಕುರಿತು ಚರ್ಚಿಸಲು ಕಾನೂನು ಆಯೋಗ ಕರೆದ ಸಭೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಗೈರಾಗಿದ್ದವು.

 ಇನ್ನು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರಿಂದ ರಾಷ್ಟ್ರೀಯ ಹಿತಾಸಕ್ತಿಗಳು ಮುನ್ನೆಲೆಗೆ ಬರಲಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲವಾಗುತ್ತದೆ. 

ಇಂಥ ಕ್ರಮದಿಂದ ಸ್ಥಳೀಯ ವಿಚಾರಗಳು ಗೌಣವಾಗುತ್ತವೆ ಎಂಬುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಾದೇಶಿಕ ಪಕ್ಷಗಳು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿವೆ. ಈ ಪ್ರಸ್ತಾವವನ್ನು ತೃಣಮೂಲ ಕಾಂಗ್ರೆಸ್‌, ಸಿಪಿಐ ಪಕ್ಷಗಳು ವಿರೋಧಿಸಿದವು. 

ಇನ್ನು ಒಟ್ಟಿಗೆ ಚುನಾವಣೆ ನಡೆಸುವುದಾದರೆ ಅದು 2024ಕ್ಕೆ ನಡೆಸಬೇಕು. ಅದಕ್ಕೂ ಮುನ್ನ ನಡೆಸಲೇಬಾರದು ಎಂದು ಎಐಎಡಿಎಂಕೆ ತನ್ನ ಅಭಿಪ್ರಾಯ ತಿಳಿಸಿತು. ಎನ್‌ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಆಯೋಗದ ಪ್ರಸ್ತಾವವನ್ನು ಬೆಂಬಲಿಸಿತು.

loader