Asianet Suvarna News Asianet Suvarna News

ಜೆಡಿಎಸ್,ಕಾಂಗ್ರೆಸ್‌ಗೆ ಮುಖಭಂಗ- ಬಿಜೆಪಿ ತೆಕ್ಕೆಗೆ ಶಿವಮೊಗ್ಗ

ಕರ್ನಾಟಕ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಶಿವಮೊಗ್ಗ ಫಲಿತಾಂಶ ಬಿಜೆಪಿ ಪಾಳಯದಲ್ಲಿ ಸಂತಸ ತಂದಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಹಿರಿಯ ನಾಯಕ ಈಶ್ವರಪ್ಪ ತವರೂರು ಶಿವಮೊಗ್ಗ ಬಿಜೆಪಿ ಭದ್ರಕೋಟೆಯಾಗಿದೆ.

Local body election Bjp sweeps in Shivamogga results
Author
Bengaluru, First Published Sep 3, 2018, 5:12 PM IST

ಶಿವಮೊಗ್ಗ(ಸೆ.03): ಮಹಾನಗರಪಾಲಿಕೆಯಾದ ನಂತರದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಿದೆ. ಈ ಮೂಲಕ ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 

ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಒಳಜಗಳ, ನಾಯಕರ ನಡುವಿನ ಬಿಕ್ಕಟ್ಟು ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ವರವಾಗಿ ಪರಿಣಿಮಿಸಿತ್ತು. ಆದರೆ ಈ ಬಾರಿ ಬಿಜೆಪಿ ಒಗ್ಗಟ್ಟಿನ ಮಂತ್ರ ಜಪಿಸಿತ್ತು.  ಬಿಜೆಪಿಯ ಈಶ್ವರಪ್ಪ ಮತ್ತು ರುದ್ರೇಗೌಡರ ಒಗ್ಗಟ್ಟಿನ ತಂತ್ರಗಾರಿಕೆ ಫಲಿಸಿದೆ  ಶಿವಮೊಗ್ಗ ಪಾಲಿಕೆಯಲ್ಲಿ ಜೆಡಿಎಸ್​​ಗೆ ಭಾರೀ ನಷ್ಟವಾಗಿದೆ.

ಕಳೆದ ಅವಧಿಯಲ್ಲಿ 5 ಸ್ಥಾನವಿದ್ದ ಜೆಡಿಎಸ್​ ಈ ಬಾರಿ ಕೇವಲ 1 ಸ್ಥಾನದಲ್ಲಿ ಗೆದ್ದಿದೆ. ಕಾಂಗ್ರೆಸ್​ ನಾಯಕತ್ವಕ್ಕೆ ಶಿವಮೊಗ್ಗ ನಗರದ ಜನತೆ ತೀವ್ರ ಹೊಡೆತ ಕೊಟ್ಟಿದ್ದಾರೆ.

ಶಿವಮೊಗ್ಗ ಮಹಾನಗರಿ ಪಾಲಿಕೆ
ಒಟ್ಟು ವಾರ್ಡ್: 35
ಬಿಜೆಪಿ-25
ಕಾಂಗ್ರೆಸ್-7
ಜೆಡಿಎಸ್ -02
ಪಕ್ಷೇತರರು-06

Follow Us:
Download App:
  • android
  • ios