ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಇದೀಗ ಬಿಜೆಪಿ ಮೇಲುಗೈ ಸಾಧಿಸಿದೆ.

ಯಾದಗಿರಿ (ಸೆ.೩):  ಒಟ್ಟು 2 ನಗರಸಭೆ ಹಾಗೂ 1 ಪುರಸಭೆ ಇದೆ. ಇದರಲ್ಲಿ ಯಾದಗಿರಿ ಹಾಗೂ ಸುರಪುರ ಎರಡರಲ್ಲೂ ಕಮಲ ವಿಜಯ ಪತಾಕೆ ಹಾರಿಸಿದೆ. ಅಲ್ಲಿಗೆ ಎರಡೂ ನಗರ ಸಭೆ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ.

ಇನ್ನು ಗುರು ಮಿಠ್ಕಲ್ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವನ್ನು ಕಂಡಿದೆ. ಬಾರೀ ಪೈಪೋಟಿ ಇದ್ದಿದ್ದರಿಂದ ಬಿಜೆಪಿ ಸೋಲನುಭವಿಸಬೇಕಾಯಿತು