ವಿವಿಗಳಿಗೆ ಶುರುವಾಯ್ತು ಸಿಂಡಿಕೇಟ್ ಲಾಬಿ; ಕಳಂಕಿತ ವ್ಯಕ್ತಿಗಳಿಂದ ಸಿಂಡಿಕೇಟ್ ಸದಸ್ಯತ್ವಕ್ಕೆ ಅರ್ಜಿ..!

Lobby in University
Highlights

ಕೇಂದ್ರ ಹಾಗೂ ಉತ್ತರ ವಿವಿಗಳಿಗೆ ಸಿಂಡಿಕೇಟ್ ಲಾಬಿ ಶುರುವಾಗಿದೆ. ಸಿಂಡಿಕೇಟ್ ಸದಸ್ಯತ್ವ ಪಡೆಯಲು ಕೆಲ ಅನರ್ಹ ವ್ಯಕ್ತಿಗಳು ಕೇಂದ್ರ ಹಾಗೂ ಉತ್ತರ ವಿವಿಗೆ ಅರ್ಜಿ ಸಲ್ಲಿಸಿದ್ದಾರೆ..ಆದ್ರೆ ಇವರ ಅರ್ಜಿ ಸಲ್ಲಿಕೆಗೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು (ಮಾ. 15): ಕೇಂದ್ರ ಹಾಗೂ ಉತ್ತರ ವಿವಿಗಳಿಗೆ ಸಿಂಡಿಕೇಟ್ ಲಾಬಿ ಶುರುವಾಗಿದೆ. ಸಿಂಡಿಕೇಟ್ ಸದಸ್ಯತ್ವ ಪಡೆಯಲು ಕೆಲ ಅನರ್ಹ ವ್ಯಕ್ತಿಗಳು ಕೇಂದ್ರ ಹಾಗೂ ಉತ್ತರ ವಿವಿಗೆ ಅರ್ಜಿ ಸಲ್ಲಿಸಿದ್ದಾರೆ..ಆದ್ರೆ ಇವರ ಅರ್ಜಿ ಸಲ್ಲಿಕೆಗೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೊಸದಾಗಿ ರೂಪುಗೊಂಡಿರುವ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ..ಇನ್ನೊಂದು ಕಡೆ ಹಾಲಿ ಸಿಂಡಿಕೇಟ್ ಸದಸ್ಯರು ತಮ್ಮ ಚೇಲಗಳನ್ನ ಹೊಸ ವಿವಿಗಳಿಗೆ ನೇಮಕ ಮಾಡಿಸಲು ಮುಂದಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ..ಈಗಾಗಲೇ ಸಿಂಡಿಕೇಟ್ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿರುವ ಪೈಕಿ ನಾಲ್ಕೈದು ವ್ಯಕ್ತಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಇಂತ ಅನರ್ಹ ವ್ಯಕ್ತಿಗಳನ್ನ ಯಾವುದೇ ಕಾರಣಕ್ಕೂ ಸಿಂಡಿಕೇಟ್ ಸದಸ್ಯತ್ವ ನೀಡಬಾರದು ಅಂತ ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ..

ಇನ್ನು ಕೇಂದ್ರ ಹಾಗೂ ಉತ್ತರ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯತ್ವ ಪಡೆಯಲೂ ನೂರಾರು ಅರ್ಜಿಗಳು ಬಂದಿವೆ.ಇದ್ರಲ್ಲಿ ಬಹುತೇಕ ಅರ್ಜಿಗಳು ರಾಜಕಾರಣಿಗಳ ಶಿಫಾರಸ್ಸು ಪತ್ರಗಳನ್ನು ಲಗಾತಿಸಿದ್ದಾರೆ ಎಂದು ತಿಳಿದು ಬಂದಿದೆ..ಹೀಗಾಗಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಉತ್ತಮ ಶೈಕ್ಷಣಿಕ ಪ್ರಜ್ಞೆ ಇರುವ ವ್ಯಕ್ತಿಗಳನ್ನ ನೇಮಕ ಮಾಡುವಂತೆ ಸರ್ಕಾರಕ್ಕೆ ವಿವಿ ಕುಲಪತಿಗಳು ಪತ್ರ ಬರೆದಿದ್ದಾರೆ..

ಒಟ್ಟಿನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯತ್ವ ಪಡೆಯಲು ದೊಡ್ಡ ಲಾಭಿ ಶುರುವಾಗಿದೆ..ಆಲ್ಲದೆ ಪರೀಕ್ಷಾ ಅಕ್ರಮ ಹಾಗೂ ಗಂಭೀರ ಆರೋಪ ಕೇಳಿ ಬಂದಿರುವ ವ್ಯಕ್ತಿಗಳನ್ನ ಸಿಂಡಿಕೇಟ್ ಸದಸ್ಯತ್ವ ನೀಡದಿರುವಂತೆ ರಾಜ್ಯಪಾಲರಿಗೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ಮನವಿ ಮಾಡಿದೆ. 

ವರದಿ: ನಂದೀಶ್ 


 

loader