ಯಾವ್ಯಾವ ವಸ್ತುಗಳ ಬೆಲೆ ಏರುತ್ತದೆ? ಯಾವ್ಯಾವ ವಸ್ತುಗಳು ಅಗ್ಗವಾಗುತ್ತವೆ? ಎಂಬುದರ ಪಟ್ಟಿ ಇಲ್ಲಿದೆ.
ನವದೆಹಲಿ(ಏ. 01): ಇತ್ತೀಚಿನ ಕೇಂದ್ರ ಬಜೆಟ್'ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಬಕಾರಿ ಸುಂಕ ದರದಲ್ಲಿ ಒಂದಷ್ಟು ಬದಲಾವಣೆ ತಂದಿದ್ದರು. ಏಪ್ರಿಲ್ 1ರಿಂದ, ಅಂದರೆ ಇಂದಿನಿಂದ ಅದು ಅನ್ವಯವಾಗಲಿದೆ. ಯಾವ್ಯಾವ ವಸ್ತುಗಳ ಬೆಲೆ ಏರುತ್ತದೆ? ಯಾವ್ಯಾವ ವಸ್ತುಗಳು ಅಗ್ಗವಾಗುತ್ತವೆ? ಎಂಬುದರ ಪಟ್ಟಿ ಇಲ್ಲಿದೆ.
ಏಪ್ರಿಲ್ 1ರಿಂದ ಯಾವುವು ಅಗ್ಗ?
* ದೇಶೀಯ ವಾಟರ್ ಫಿಲ್ಟರ್
* ಚರ್ಮೋತ್ಪನ್ನಗಳು
* ಸೋಲಾರ್ ಪ್ಯಾನೆಲ್ಸ್'ಗೆ ಬಳಸುವ ಟೆಂಪರ್ಡ್ ಗ್ಲಾಸ್'ಗಳು
* ಡೆಬಿಟ್-ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಯಂತ್ರಗಳು
* ಫಿಂಗರ್'ಪ್ರಿಂಟ್ ರೀಡರ್ಸ್
* ಐಆರ್'ಸಿಟಿಸಿಯಿಂದ ಬುಕ್ ಅಗುವ ಅನ್'ಲೈನ್ ಟಿಕೆಟ್
* ಎಲ್'ಎನ್'ಜಿ
* ಫುಯೆಲ್ ಸೆಲ್ ಆಧಾರಿತ ವಿದ್ಯುತ್ ಉತ್ಪಾದನೆ ಯಂತ್ರಗಳು
* ವಾಯು ಚಾಲಿತ ಜನರೇಟರ್
* ಡಿಫೆನ್ಸ್ ಸರ್ವಿಸ್ ವಲಯದ ಗ್ರೂಪ್ ಇನ್ಷೂರೆನ್ಸ್
ಏಪ್ರಿಲ್ 1ರಿಂದ ಯಾವುದು ದುಬಾರಿ?
* ಬ್ಯಾಂಕ್'ಗಳಲ್ಲಿ ನಗದು ವಹಿವಾಟು, ಸೇವಾ ಶುಲ್ಕ
* ವಿದೇಶಿ ಸರ್ಕೀಟ್ ಬೋರ್ಡ್ ಇರುವ ಮೊಬೈಲ್ ಫೋನ್
* ದೇಶಿಯವಾಗಿ ಉತ್ಪಾದನೆಯಾಗುವ ಎಲ್'ಇಡಿ ಬಲ್ಬ್'ಗಳು
* ಸಿಗರೇಟ್
* ಪಾನ್ ಮಸಾಲ
* ಚೆರೂಟ್(ಸಿಗಾರ್'ನಂತಹ ತಂಬಾಕು ವಸ್ತು)
* ಬೀಡಿ
* ತಂಬಾಕು
* ಗೋಡಂಬಿ
* ಅಲೂಮಿನಿಯಂ ಅದಿರು
* ಪಾಲಿಮರ್ ಕೋಟ್ ಮಾಡಿದ ಎಂಎಸ್ ಟೇಪ್'ಗಳು
* ಬೆಳ್ಳಿ ನಾಣ್ಯ ಮತ್ತು ಪದಕಗಳು
* ಶೇ.99.9 ಶುದ್ಧತೆಯ ಚಿನ್ನ-ಬೆಳ್ಳಿ ನಾಣ್ಯ
* ವಾಹನ, ಆರೋಗ್ಯ ವಿಮೆ ಶೇ.5ರಷ್ಟು ದುಬಾರಿ
ಏಪ್ರಿಲ್ 1 ರಿಂದ ಏನೇನು ಬದಲಾವಣೆ?
* ಒಂದು ಪುಟದ ತೆರಿಗೆ ರಿಟರ್ನ್ ಅರ್ಜಿ; ಇದರಿಂದ 2 ಕೋಟಿ ಜನರಿಗೆ ಅನುಕೂಲ
* ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ರೆ ಎಸ್'ಬಿಐ ದಂಡ; 3ಕ್ಕಿಂತ ಹೆಚ್ಚು ಬಾರಿ ಠೇವಣಿ ಇಟ್ಟರೆ ದಂಡ; ಪ್ರತಿ ಹೆಚ್ಚುವರಿ ಠೇವಣಿಗೆ 50 ರೂ. ದಂಡ
* ಪಿಪಿಎಫ್ ಬಡ್ಡಿ ದರ 7.9ಕ್ಕೆ ಇಳಿಕೆ; 40 ವರ್ಷಗಳಲ್ಲಿ ಅತಿ ಕಡಿಮೆ ಬಡ್ಡಿ
* ಎಸ್ಬಿಐನಲ್ಲಿ ಐದು ಬ್ಯಾಂಕ್ಗಳ ವಿಲೀನ; ಇಂದಿನಿಂದ ಎಸ್'ಬಿಎಂ ಬ್ಯಾಂಕ್ ಇರಲ್ಲ
* 2 ಲಕ್ಷ ಮೀರಿ ನಗದು ವ್ಯವಹಾರ ಇಲ್ಲ; 2 ಲಕ್ಷ ಮೀರಿದರೆ ಅಷ್ಟೇ ಮೊತ್ತದ ದಂಡ
* ಹಳೇ 500-1000ನೋಟು ಇಟ್ಟುಕೊಳ್ಳುವಂತಿಲ್ಲ; ಹಳೇ ನೋಟು ಪತ್ತೆಯಾದರೆ 10 ಪಟ್ಟು ದಂಡ
