ಅವರ ಸಿನಿಮಾಗಳಿಗೆ ದೊಡ್ಡದೊಡ್ಡ ಪ್ರಶಸ್ತಿಗಳು ಬರದೇ ಇದ್ದರೂ ಸೂಪರ್'ಹಿಟ್ ಆದ ಚಿತ್ರಗಳ ಸಂಖ್ಯೆ ಹಾಫ್ ಸೆಂಚುರಿ ದಾಟಿದೆ. ಪತಿ ಡಾ. ರಾಜಕುಮಾರ್ ಮತ್ತು ಮೂವರು ಮಕ್ಕಳ ಚಿತ್ರಗಳನ್ನು ಅವರು ನಿರ್ಮಿಸಿ ಯಶಸ್ಸು ಕಂಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್'ನಲ್ಲಿ ಅವರು ತಮ್ಮ ಪತಿ, ಮಕ್ಕಳ ಚಿತ್ರಗಳನ್ನಷ್ಟೇ ಅಲ್ಲ, ಬೇರೆ ನಾಯಕರನ್ನಿಟ್ಟುಕೊಂಡೂ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು: ಪಾರ್ವತಮ್ಮ ರಾಜಕುಮಾರ್ ದಶಕಗಳ ಕಾಲ ಕನ್ನಡ ಚಿತ್ರರಂಗದ ಆಧಾರಸ್ತಂಭವಾಗಿದ್ದರೆಂದು ಹೇಳುವುದರಲ್ಲಿ ಅತಿಶಯೋಕ್ತಿ ಇಲ್ಲ. "ತ್ರಿಮೂರ್ತಿ" ಇಂದ ಆರಂಭವಾಗಿ ಇತ್ತೀಚೆಗೆ ತೆರೆ ಕಂಡ "ರಾಜಕುಮಾರ" ವರೆಗೆ ಅವರು 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡದೊಡ್ಡ ಪ್ರಶಸ್ತಿಗಳು ಬರದೇ ಇದ್ದರೂ ಸೂಪರ್'ಹಿಟ್ ಆದ ಚಿತ್ರಗಳ ಸಂಖ್ಯೆ ಹಾಫ್ ಸೆಂಚುರಿ ದಾಟಿದೆ. ಪತಿ ಡಾ. ರಾಜಕುಮಾರ್ ಮತ್ತು ಮೂವರು ಮಕ್ಕಳ ಚಿತ್ರಗಳನ್ನು ಅವರು ನಿರ್ಮಿಸಿ ಯಶಸ್ಸು ಕಂಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್'ನಲ್ಲಿ ಅವರು ತಮ್ಮ ಪತಿ, ಮಕ್ಕಳ ಚಿತ್ರಗಳನ್ನಷ್ಟೇ ಅಲ್ಲ, ಬೇರೆ ನಾಯಕರನ್ನಿಟ್ಟುಕೊಂಡೂ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪಾರ್ವತಮ್ಮ ರಾಜಕುಮಾರ್ ಸಾಧನೆಯನ್ನು ಗುರುತಿಸಿ ಕೆಲವಾರು ಪ್ರಶಸ್ತಿ ಗೌರವಗಳು ಸಂದಾಯವಾಗಿವೆ. ಇತ್ತೀಚೆಗೆ ಸಿಕ್ಕ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಜೀವಿತಾವಧಿ ಸಾಧನೆ ಪ್ರಶಸ್ತಿ, ಸುವರ್ಣ ಪ್ರಶಸ್ತಿ ಇತ್ಯಾದಿ ಗೌರವಗಳು ಸಿಕ್ಕಿವೆ. "ಹಾಲು ಜೇನು", "ಶಬ್ದವೇದಿ" ಮತ್ತು "ಜೀವನಚೈತ್ರ" ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. "ಭಾಗ್ಯದ ಲಕ್ಷ್ಮೀ ಬಾರಮ್ಮ" ಮತ್ತು "ಜಾಕಿ" ಚಿತ್ರಗಳಿಗೆ ಫಿಲಂಫೇರ್ ಅವಾರ್ಡ್ ಪ್ರಾಪ್ತವಾಗಿವೆ.
ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಮಾಡಿದ ಸಿನಿಮಾಗಳು
ಡಾ|| ರಾಜ್'ಕುಮಾರ್ ಚಿತ್ರಗಳು:
ತ್ರಿಮೂರ್ತಿ
ಗಿರಿ ಕನ್ಯೆ
ಒಲವು ಗೆಲುವು
ಶಂಕರ್ ಗುರು
ತಾಯಿಗೆ ತಕ್ಕ ಮಗ
ರವಿಚಂದ್ರ
ವಸಂತ ಗೀತಾ
ಹಾವಿನ ಹೆಡೆ
ನೀ ನನ್ನ ಗೆಲ್ಲಲಾರೆ
ಭಾಗ್ಯವಂತ
ಹೊಸಬೆಳಕು
ಹಾಲು ಜೇನು
ಚಲಿಸುವ ಮೋಡಗಳು
ಕವಿರತ್ನ ಕಾಳಿದಾಸ
ಕಾಮನಬಿಲ್ಲು
ಭಕ್ತ ಪ್ರಹ್ಲಾದ
ಎರಡು ನಕ್ಷತ್ರಗಳು
ಸಮಯದ ಗೊಂಬೆ
ಶ್ರಾವಣ ಬಂತು
ಯಾರಿವನು?
ಅಪೂರ್ವ ಸಂಗಮ
ಜ್ವಾಲಾಮುಖಿ
ಧ್ರುವತಾರೆ
ಭಾಗ್ಯದ ಲಕ್ಷ್ಮೀ ಬಾರಮ್ಮ
ಅನುರಾಗ ಅರಳಿತು
ಗುರಿ
ಒಂದು ಮುತ್ತಿನ ಕಥೆ
ಶೃತಿ ಸೇರಿದಾಗ
ಶಿವ ಮೆಚ್ಚಿದ ಕಣ್ಣಪ್ಪ
ದೇವತಾ ಮನುಷ್ಯ
ಪರಶುರಾಮ್
ಜೀವನ ಚೈತ್ರ
ಆಕಸ್ಮಿಕ
ಒಡಹುಟ್ಟಿದವರು
ಶಬ್ದವೇದಿ
ಶಿವರಾಜಕುಮಾರ್ ಚಿತ್ರಗಳು
ಆನಂದ್
ರಥ ಸಪ್ತಮಿ
ಮನ ಮೆಚ್ಚಿದ ಹುಡುಗಿ
ಸಂಯುಕ್ತ
ಆಸೆಗೊಬ್ಬ ಮೀಸೆಗೊಬ್ಬ
ಅರಳಿದ ಹೂಗಳು
ರಣರಂಗ
ಇನ್ಸ್'ಪೆಕ್ಟರ್ ವಿಕ್ರಮ್
ಅದೇ ರಾಗ ಅದೇ ಹಾಡು
ಮೃತ್ಯುಂಜಯ
ಮಿಡಿದ ಶೃತಿ
ಓಂ
ಮೋಡದ ಮರೆಯಲ್ಲಿ
ಜನುಮದ ಜೋಡಿ
ಹೃದಯ ಹೃದಯ
ಚಿಗುರಿದ ಕನಸು
ರಾಘವೇಂದ್ರ ರಾಜಕುಮಾರ್ ಚಿತ್ರಗಳು
ಚಿರಂಜೀವಿ ಸುಧಾಕರ್
ನಂಜುಂಡಿ ಕಲ್ಯಾಣ
ಗಜಪತಿ ಗರ್ವಭಂಗ
ಗೆಲುವಿನ ಸರದಾರ
ಸೂತ್ರಧಾರ
ಅನುಕೂಲಕ್ಕೊಬ್ಬ ಗಂಡ
ಅರಳಿದ ಹೂಗಳು
ಕಲ್ಯಾಣ ಮಂಟಪ
ಭರ್ಜರಿ ಗಂಡು
ಅನುರಾಗದ ಅಲೆಗಳು
ನಾವಿಬ್ಬರು ನಮಗಿಬ್ಬರು
ಸ್ವಸ್ತಿಕ್
ಟುವ್ವಿ ಟುವ್ವಿ ಟುವ್ವಿ
ಪುನೀತ್ ರಾಜ್'ಕುಮಾರ್ ಚಿತ್ರಗಳು
ಅಪ್ಪು
ಅಭಿ
ಆಕಾಶ್
ಅರಸು
ವಂಶಿ
ಬೆಟ್ಟದ ಹೂವು
ಜಾಕಿ
ಹುಡುಗರು
ಅಣ್ಣಾ ಬಾಂಡ್
ಯಾರೇ ಕೂಗಾಡಲಿ
ರಾಜಕುಮಾರ
