ಕಳೆದ 6 ತಿಂಗಳಲ್ಲಿ ನಡೆದ ಬಂದ್ಗಳು ಹಾಗೂ ಕಾರಣಗಳು
1)ಏಪ್ರಿಲ್ 19 - ಪಿಎಫ್ ಕಾರ್ಮಿಕರ ಘರ್ಷಣೆಯಿಂದ ಅಘೋಷಿತ ಬಂದ ವಾತಾವರಣ
ಮುಷ್ಕರ ನಡೆಸಿದವರು - ವಿವಿಧ ವಲಯಗಳ ಕಾರ್ಮಿಕ ವರ್ಗ
ಕಾರಣ - ಕೇಂದ್ರದ ಪಿಎಫ್ ನೀತಿ ಖಂಡಿಸಿ ಮುಷ್ಕರ
2)ಜುಲೈ 25 ರಿಂದ 27 - ಸಾರಿಗೆ ಮುಷ್ಕರ.
ಮುಷ್ಕರ ನಡೆಸಿದವರು - ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಚಾಲಕರು, ಕಂಡಕ್ಟರ್ಗಳು ಮತ್ತು ತಾಂತ್ರಿಕ ಸಿಬ್ಬಂದಿ.
ಕಾರಣ - ಶೇ.35 ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹ.
3)ಜುಲೈ 27 - ಉತ್ತರ ಕರ್ನಾಟಕ ಬಂದ್
ಬಂದ್ ನಡೆಸಿದವರು - ವಿವಿಧ ಕನ್ನಡ ಪರ ಸಂಘಟನೆಗಳು.
ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ಖಂಡಿಸಿ ಕರ್ನಾಟಕ ಬಂದ್
4)ಜುಲೈ 30 - ಕರ್ನಾಟಕ ಬಂದ್
ಬಂದ್ ನಡೆಸಿದವರು - ವಿವಿಧ ಕನ್ನಡ ಪರ ಸಂಘಟನೆಗಳು, ಚಿತ್ರೋದ್ಯಮ, ಸಾರಿಗೆ ಸಂಘಟನೆಗಳು.
ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ಖಂಡಿಸಿ ಕರ್ನಾಟಕ ಬಂದ್
5)ಸೆಪ್ಟೆಂಬರ್ 2 - ಭಾರತ್ ಬಂದ್
ಬಂದ್ ನಡೆಸಿದವರು - ಕಾರ್ಮಿಕ ಸಂಘಟನೆಗಳು, ಸಾರಿಗೆ ಸಂಘಟನೆಗಳು, ಆಟೋ ಸಂಘಟನೆಗಳು, ಮ್ಯಾಕ್ಸಿ ಕ್ಯಾಬ್ ಸಂಘಟನೆಗಳು.
ಕೇಂದ್ರದ ಕಾರ್ಮಿಕ ನೀತಿ ಮತ್ತು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಕಾಯ್ದೆ ಖಂಡಿಸಿ ಬಂದ್.
