ಇತ್ತೀಚೆಗೆ ಕೆಲವು ಸ್ವಯಂಘೋಷಿತ ಹಿಂದು ಸಾಧು ಸಂತರ ಮೇಲೆ ಅತ್ಯಾಚಾರದಂಥ ಗುರುತರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಹಿಂದುಗಳ ಮುಖ್ಯ ಧಾರ್ಮಿಕ ಸಂಘಟನೆಗಳಲ್ಲಿ ಒಂದಾದ ಅಖಾಡಾ ಪರಿಷತ್ತು, ಇಂಥ ನಕಲಿ ಬಾಬಾಗಳ ಪಟ್ಟಿಯೊಂದನ್ನು ಇದೇ ಮೊದಲ ಬಾರಿ ಬಿಡುಗಡೆ ಮಾಡಿದೆ. ಅಲ್ಲದೆ, ‘ಸಂತ’ ಪದವಿ ಪಡೆಯಲು ಇರುವ ಅರ್ಹತೆಗಳು ಏನೆಂಬ ಬಗ್ಗೆ ಮಾನದಂಡಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ನವದೆಹಲಿ/ಅಲಹಾಬಾದ್: ಇತ್ತೀಚೆಗೆ ಕೆಲವು ಸ್ವಯಂಘೋಷಿತ ಹಿಂದು ಸಾಧು ಸಂತರ ಮೇಲೆ ಅತ್ಯಾಚಾರದಂಥ ಗುರುತರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಹಿಂದುಗಳ ಮುಖ್ಯ ಧಾರ್ಮಿಕ ಸಂಘಟನೆಗಳಲ್ಲಿ ಒಂದಾದ ಅಖಾಡಾ ಪರಿಷತ್ತು, ಇಂಥ ನಕಲಿ ಬಾಬಾಗಳ ಪಟ್ಟಿಯೊಂದನ್ನು ಇದೇ ಮೊದಲ ಬಾರಿ ಬಿಡುಗಡೆ ಮಾಡಿದೆ. ಅಲ್ಲದೆ, ‘ಸಂತ’ ಪದವಿ ಪಡೆಯಲು ಇರುವ ಅರ್ಹತೆಗಳು ಏನೆಂಬ ಬಗ್ಗೆ ಮಾನದಂಡಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಈ ಬಗ್ಗೆ ಅಲಹಾಬಾದ್’ನಲ್ಲಿ ಸಭೆ ಸೇರಿದ ಅಖಾಡಾ ಪರಿಷತ್ತು ಹಾಗೂ ವಿಶ್ವಹಿಂದು ಪರಿಷತ್ತಿನ ಮುಖಂಡರು 14 ನಕಲಿ ಸಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅತ್ಯಾಚಾರ, ಕಪಟ ಇತ್ಯಾದಿ ಆರೋಪಗಳಿಗೆ ಗುರಿಯಾಗಿರುವ ಆಸಾರಾಂ ಬಾಪು, ರಾಧೇ ಮಾ, ಸಚ್ಚಿದಾನಂದ ಗಿರಿ ಅಲಿಯಾಸ್ ಸಚಿನ್ ದತ್ತ, ಗುರ್ಮೀತ್ ರಾಮ್ ರಹೀಂ ಸಿಂಗ್, ಇಚ್ಛಾಧಾರಿ ಭೀಮಾನಂದ ಸೇರಿ 14 ಜನರಿದ್ದಾರೆ.
ಇಂದು ‘ಸಂತ’ ಎಂಬ ಪದವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಪದವಿ ನೀಡ ಬೇಕು ಎಂದರೆ ಕೆಲವು ಅರ್ಹತೆಗಳನ್ನು ವ್ಯಕ್ತಿ ಹೊಂದಿರ ಬೇಕಾಗುತ್ತ ದೆ. ಆ ಅರ್ಹತೆಗಳನ್ನು ನಿಗದಿಪಡಿಸಲು ಅಖಾಡಾ ಪರಿಷತ್ತು ಮತ್ತು ವಿಎಚ್’ಪಿ ತೀರ್ಮಾನಿಸಿವೆ ಎಂದು ಅಖಾಡಾ ಪರಿಷತ್ತು ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹಾಗೂ ವಿಎಎಚ್’ಪಿ ಮುಖಂಡ ಸುರೇಂದ್ರ ಜೈನ್ ಹೇಳಿದರು.
ಅಲ್ಲ ದೆ, ಸಂತರು ಅವರ ಹೆಸರಿನಲ್ಲಿ ಯಾವುದೇ ಹಣ, ಆಸ್ತಿ ಹೊಂದಿರ ಬಾರದು ಎಂಬ ನಿಯಮವನ್ನೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಅದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರೀ ಶಂಕರಾಚಾರ್ಯರ ಪರಂಪರೆ ಅನುಸಾರ ಹಿಂದು ಸಂತರ 14 ಅಖಾಡಗಳನ್ನು ಒಟ್ಟುಗೂಡಿಸಿ ಅಖಿಲ ಭಾರತೀಯ ಅಖಾಡಾ ಪರಿಷತ್ತನ್ನು ರಚಿಸಲಾಗಿದೆ.
ಆಸಾರಾಂ ಬಾಪು
ರಾಧೇ ಮಾ
ಸಚ್ಚಿದಾನಂದ ಗಿರಿ
ಗುರ್ಮೀತ್ ರಾಮ್
ಇಚ್ಛಾಧಾರಿ ಭೀಮಾನಂದ
ಮಲ್ಖಾನ್ ಸಿಂಗ್
ನಾರಾಯಣ ಗಿರಿ
ರಾಮಪಾಲ್
ಆಚಾರ್ಯ ಕುಶ್ಮುನಿ
ಸ್ವಾಮಿ ಅಸೀಮಾನಂದ
ಬೃಹಸ್ವತಿ ಗಿರಿ
ಓಂ ನಮಃ ಶಿವಾಯ ಬಾಬಾ
ನಿರ್ಮಲ್ ಬಾಬಾ
ಓಂ ಬಾಬಾ
