ಕೊಚ್ಚಿ[ಮೇ.09]: ಕಳೆದ ವರ್ಷ ಕಂಡುಕೇಳರಿಯದ ಭಾರೀ ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿದ್ದ ಹೊರತಾಗಿಯೂ, ಕೇರಳದಲ್ಲಿ ಮದ್ಯಸೇವನೆ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಕೇರಳ ರಾಜ್ಯ ಪಾನೀಯ ನಿಗಮ ನಿಯಮಿತ (ಬಿಇವಿಸಿಒ)ದ ದಾಖಲೆಯ ಪ್ರಕಾರ 2018-19ನೇ ಸಾಲಿನಲ್ಲಿ ಬರೋಬ್ಬರಿ 14,508 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.

2018-19ನೇ ವಿತ್ತ ವರ್ಷದಲ್ಲಿ ಬಿಇವಿಸಿಒ ಮತ್ತು ಕೇರಳ ರಾಜ್ಯ ಗ್ರಾಹಕರ ಫೆಡರೇಷನ್‌ಗೆ ಸೇರಿದ ಮಳಿಗೆಗಳಲ್ಲಿಯೇ 14,508 ಕೋಟಿ ರು. ಮೊತ್ತದ ಮದ್ಯ ಮಾರಾಟವಾಗಿದೆ. ಇಂದು ಹಿಂದಿನ ವರ್ಷಕ್ಕಿಂತ 1570 ಕೋಟಿ ರು. ಹೆಚ್ಚಿನ ಪ್ರಮಾಣ.

ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಕಳೆದ ಆಗಷ್‌್ಟನಲ್ಲಿ ಕೇರಳದ ಬಹುತೇಕ ಭಾಗ ಪ್ರವಾಹಕ್ಕೆ ಒಳಗಾಗಿತ್ತು. ಬಿಇವಿಸಿಒ ದತ್ತಾಂಶದ ಪ್ರಕಾರ ಆಗಸ್ಟ್‌ ತಿಂಗಳೊಂದರಲ್ಲೇ 1264 ಕೋಟಿ ರು. ಮದ್ಯ ಮಾರಾಟವಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಓಣಮ್‌ ತಿಂಗಳಲ್ಲಿ ಹೆಚ್ಚುಕಡಿಮೆ 1200 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗುತ್ತದೆ. 1984-85ನೇ ಸಾಲಿನಿಂದ ಈತನಕ ಕೇರಳದಲ್ಲಿ ಮದ್ಯ ಮಾರಾಟದ ಕುಸಿತ ಕಂಡೇ ಇಲ್ಲ. ಆ ದಿನದಲ್ಲೇ 55.46 ಕೋಟಿ ರು. ಆದಾಯ ಮದ್ಯ ಮಾರಾಟದಿಂದ ಬಂದಿತ್ತು.