Asianet Suvarna News Asianet Suvarna News

ದೇಶದಲ್ಲಿ ಕುಡುಕರ ಪ್ರಮಾಣ ಡಬಲ್!

ಭಾರತದಲ್ಲಿ ತಲಾ ಮದ್ಯಪಾನ ಪ್ರಮಾಣವು ಕಳೆದ 11 ವರ್ಷಗಳಲ್ಲಿ 5.7 ಲೀಟರ್‌ಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಯಿಂದ ತಿಳಿದುಬಂದಿದೆ. 

Liquor sales double in India
Author
Bengaluru, First Published Sep 23, 2018, 10:50 AM IST

ನವದೆಹಲಿ (ಸೆ. 23): ಭಾರತದಲ್ಲಿ ತಲಾ ಮದ್ಯಪಾನ ಪ್ರಮಾಣವು ಕಳೆದ 11 ವರ್ಷಗಳಲ್ಲಿ 5.7 ಲೀಟರ್‌ಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಯಿಂದ ತಿಳಿದುಬಂದಿದೆ

ಈ ಪ್ರಕಾರ ದೇಶದಲ್ಲಿ 2005 ರಲ್ಲಿ ತಲಾ ಮದ್ಯಪಾನ ಪ್ರಮಾಣವು 2.4 ಲೀಟರ್ ಇತ್ತು. ಇದು 2016 ರಲ್ಲಿ 5.7 ಲೀ.ಗೆ ಏರಿದೆ. ಇದರಲ್ಲಿ ಪುರುಷರ ತಲಾ ಮದ್ಯಪಾನ ಪ್ರಮಾಣ 4.2 ಲೀ. ಮತ್ತು ಮಹಿಳೆಯರ ತಲಾ ಮದ್ಯ ಸೇವನೆ ಪ್ರಮಾಣ 1.5 ಲೀ.ನಷ್ಟಿದೆ.

ಅಪಘಾತ: ದೇಶದಲ್ಲಿ ನಡೆಯುವ ಮೂರು ರಸ್ತೆ ಅಪಘಾತಗಳಲ್ಲಿ ಒಂದು ಅಪಘಾತವು ಮದ್ಯಪಾನ ಸೇವನೆಯಿಂದಾಗಿಯೇ ಸಂಭವಿಸುವಂಥದ್ದಾಗಿದೆ. ಒಟ್ಟು 1 ಲಕ್ಷ ಜನಸಂಖ್ಯೆ ಪೈಕಿ 51.1ರಷ್ಟು ಪುರುಷರು ಹಾಗೂ ಹಾಗೂ 27.1 ಮಹಿಳೆಯರು ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದಾರೆ ಇವರಲ್ಲಿ ಶೇ.70 ರಷ್ಟು ಮಂದಿ ಕುಡಿತದ ದಾಸರೇ ಆಗಿದ್ದಾರೆ.

30 ಲಕ್ಷ ಮಂದಿ ಬಲಿ: ಮದ್ಯಪಾನ ಸೇವನೆಯಿಂದಲೇ 2016 ರಲ್ಲಿ ವಿಶ್ವಾದ್ಯಂತ 30 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಕೂಡ ಡಬ್ಲ್ಯುಎಚ್‌ನಿಂದ ಬಯಲಾಗಿದೆ. 

Follow Us:
Download App:
  • android
  • ios