ತಾಂಡಾಗಳು ಅಂದರೆ ಕಳ್ಳಬಟ್ಟಿ, ಸೇಂದಿ, ಮದ್ಯವ್ಯಸನಿಗಳೇ ಹೆಚ್ಚು ನೆನಪಿಗೆ ಬರುತ್ತವೆ. ಆದರೆ, ಈ ಗ್ರಾಮದಲ್ಲಿ ಮದ್ಯ ಮಾರಾಟಕ್ಕೂ ಫುಲ್ ಬ್ರೇಕ್​. ಮದಿರೆಯ ನಶೆಯಲ್ಲಿ ತೇಲಾಡುತ್ತಿದ್ದ ಈ ಊರು ಇದ್ದಕ್ಕಿದ್ದಂತೆ ಚೇಂಜ್ ಆಗಿದ್ದೇ ಇಂಟರೆಸ್ಟಿಂಗ್ ಸ್ಟೋರಿ.

ಬಳ್ಳಾರಿ(ಜ.31): ತಾಂಡಾಗಳು ಅಂದರೆ ಕಳ್ಳಬಟ್ಟಿ, ಸೇಂದಿ, ಮದ್ಯವ್ಯಸನಿಗಳೇ ಹೆಚ್ಚು ನೆನಪಿಗೆ ಬರುತ್ತವೆ. ಆದರೆ, ಈ ಗ್ರಾಮದಲ್ಲಿ ಮದ್ಯ ಮಾರಾಟಕ್ಕೂ ಫುಲ್ ಬ್ರೇಕ್​. ಮದಿರೆಯ ನಶೆಯಲ್ಲಿ ತೇಲಾಡುತ್ತಿದ್ದ ಈ ಊರು ಇದ್ದಕ್ಕಿದ್ದಂತೆ ಚೇಂಜ್ ಆಗಿದ್ದೇ ಇಂಟರೆಸ್ಟಿಂಗ್ ಸ್ಟೋರಿ.

ವಿಶ್ವಪ್ರಸಿದ್ಧ ಕಂಪಿಯ ಕಮಲಾಪುರ ಪಕ್ಕದ ಸೀತಾರಾಮ ತಾಂಡ ಗ್ರಾಮದಲ್ಲಿ ಮದ್ಯ ಪ್ರವೇಶವಿಲ್ಲ. ಯಾರೂ ಅಪ್ಪಿತಪ್ಪಿಯೂ ಕುಡಿದು ಗ್ರಾಮಕ್ಕೆ ಬರುವಂತಿಲ್ಲ. ತಾಂಡದಲ್ಲೇನಾದರೂ ಮದ್ಯ ಮಾರಾಟ ಮಾಡಿದರೆ ಗ್ರಾಮದಿಂದಲೇ ಬಹಿಷ್ಕಾರದಂತಹ ಉಗ್ರ ಶಿಕ್ಷೆ ಖಚಿತ.

ಸಾಧು ರಾಮದಾಸರ ಆದರ್ಶ ಪಾಲನೆ

ಈ ಗ್ರಾಮದ ಕ್ರಾಂತಿಕಾರಿಕ ಬದಲಾವಣೆಗೆ ಸಾಧು ರಾಮದಾಸರು ಕಾರಣ. ಇಲ್ಲೇ ನೆಲಸಿ ಅನಾಚಾರ, ಸೇಂದಿ, ಮದ್ಯ ಮಾರಬಾರದು ಅಂತ ಆದೇಶಿಸಿದ್ದರು. ಅವರ ಆದೇಶವನ್ನು ಗ್ರಾಮಸ್ಥರು ಈಗಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಅಕಸ್ಮಾತ್​ ಕುಡಿದು ಬಂದರೆ ಹಿರಿಯರಿಂದ 5 ಸಾವಿರ ರೂಪಾಯಿ ದಂಡ ಬೀಳುತ್ತದೆ.

ಸರ್ಕಾರದಿಂದ ಸಾರಾಯಿ ಸೇಲ್ ಮಾಡಲು ಪರ್ಮಿಟ್ ಪಡೆದು ಈ ಗ್ರಾಮಕ್ಕೆ ಬಂದವರೂ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹಿಂದಿರುಗಿದ್ದಾರೆ. ಗ್ರಾಮಸ್ಥರ ಒಳಿತಿಗಾಗಿ ರಾಮದಾಸರ ಆದರ್ಶ ಪಾಲಿಸಿ ಮದ್ಯ ಮುಕ್ತ ಗ್ರಾಮ ಎನ್ನುವ ಹೆಗ್ಗಳಿಕೆ ಸೀತಾರಾಮ ತಾಂಡಾಗೆ ಪ್ರಾಪ್ತಿಯಾಗಿದೆ.