ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರಕ್ಕೆ ಸರ್ಟಿಫಿಕೇಟ್ ಕೊಡುವ ವಿಚಾರದಲ್ಲಿ ಉಂಟಾಗಿರುವ ವಿವಾದಕ್ಕೆ ಸಿಬಿಎಫ್ ಸಿ ಸದಸ್ಯೆ ಮಮತಾ ಕಾಲೆ ಸೆನ್ಸಾರ್ ಮಂಡಳಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಚಿತ್ರದ ವಿಷಯವೇ ಪ್ರಮುಖ ಸಮಸ್ಯೆಯಾಗಿದೆ ಎಂದು ಕಾಲೆ ಹೇಳಿದ್ದಾರೆ.
ಮುಂಬೈ (ಫೆ.24): ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರಕ್ಕೆ ಸರ್ಟಿಫಿಕೇಟ್ ಕೊಡುವ ವಿಚಾರದಲ್ಲಿ ಉಂಟಾಗಿರುವ ವಿವಾದಕ್ಕೆ ಸಿಬಿಎಫ್ ಸಿ ಸದಸ್ಯೆ ಮಮತಾ ಕಾಲೆ ಸೆನ್ಸಾರ್ ಮಂಡಳಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಚಿತ್ರದ ವಿಷಯವೇ ಪ್ರಮುಖ ಸಮಸ್ಯೆಯಾಗಿದೆ ಎಂದು ಕಾಲೆ ಹೇಳಿದ್ದಾರೆ.
ನಿಂದನಾತ್ಮಕ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಸಿಬಿಎಫ್ ಸಿಗೆ ಬರುವ ಯಾವುದೇ ಚಿತ್ರವನ್ನು ಮಂಡಳಿ ವಿಮರ್ಷಾತ್ಮಕವಾಗಿ ನೋಡುತ್ತದೆ. ಇಡೀ ತಂಡ ಒಟ್ಟಿಗೆ ಕುಳಿತು ಚಿತ್ರವನ್ನು ವೀಕ್ಷಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಮತಾ ಕಾಲೆ ಸ್ಪಷ್ಟಪಡಿಸಿದ್ದಾರೆ.
ಮಹಿಳಾಪರವಾಗಿದೆ ಎನ್ನಲಾಗಿರುವ ಈ ಚಿತ್ರ ಖಂಡಿತವಾಗಿಯೂ ಮಹಿಳಾ ಸಬಲೀಕರಣದ ಬಗ್ಗೆ ತೋರಿಸಿಲ್ಲ. ಚಲನಚಿತ್ರ ನಿರ್ಮಾಪಕರು ಇಂತದ್ದೊಂದು ವಿವಾದಾತ್ಮಕ ವಿಚಾರವನ್ನು ತೋರಿಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಮಮತಾ ಹೇಳಿದ್ದಾರೆ.
ಖ್ಯಾತ ಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಸೆನ್ಸಾರ್ ಮಂಡಳಿ ನಿರ್ಧಾರವನ್ನು ಖಂಡಿಸಿದ್ದಾರೆ.
