ಹೊಸ ನಿಯಮವು ವಿದೇಶಿ ಖಾತೆ ತೆರಿಗೆ ಪಾಲನೆ ಕಾಯ್ದೆಯ (FATCA) ವ್ಯಾಪ್ತಿಯಲ್ಲಿ ಬರುವ ಖಾತೆಗಳಿಗೆ ಅನ್ವಯವಾಗಲಿರುವುದರಿಂದ, ಆ ಬಗ್ಗೆ ಸ್ವದೃಢೀಕರಣವನ್ನು ಕೂಡಾ ಖಾತೆದಾರರು ಸಲ್ಲಿಸಬೇಕಾಗಿದೆ ಎಂದು ಇಲಾಖೆಯು ಹೇಳಿದೆ.

ನವದೆಹಲಿ (ಏ.12): 1 ಜುಲೈ 2014 ಹಾಗೂ 31 ಆಗಸ್ಟ್ 2015 ಅವಧಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆ ತೆರೆದವರು ಏ.30ರೊಳಗೆ ‘ನೋ ಯುವರ್ ಕಸ್ಟಮರ್’ (ಕೆವೈಸಿ) ದಾಖಲೆಗಳನ್ನು ಸಲ್ಲಿಸಿ ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ನಿಯಮವು ವಿದೇಶಿ ಖಾತೆ ತೆರಿಗೆ ಪಾಲನೆ ೊಪ್ಪಂ (FATCA) ವ್ಯಾಪ್ತಿಯಲ್ಲಿ ಬರುವ ಖಾತೆಗಳಿಗೆ ಅನ್ವಯವಾಗಲಿರುವುದರಿಂದ, ಆ ಬಗ್ಗೆ ಸ್ವದೃಢೀಕರಣವನ್ನು ಕೂಡಾ ಖಾತೆದಾರರು ಸಲ್ಲಿಸಬೇಕಾಗಿದೆ ಎಂದು ಇಲಾಖೆಯು ಹೇಳಿದೆ.

ನಿಗದಿತ ದಿನಗಳೋಳಗೆ ದಾಖಲೆಗಳನ್ನು ಸಲ್ಲಿಸದ ಖಾತೆಗಳನ್ನು ಬ್ಯಾಂಕುಗಳು ಬ್ಲಾಕ್ ಮಾಡುವುದಾಗಿ ಆದಾಯ ತೆರಿಗೆ ಇಲಾಖೆಯು ಹೇಳಿದೆ. ದಾಖಲೆಗಳನ್ನು ಸಲ್ಲಿಸಿದ ಬಳಿಕ ಖಾತೆಗಳನ್ನು ಬಳಸಬಹುದಾಗಿದೆ.

ಈ ನಿಯಮವು ಬ್ಯಾಂಕ್ ಖಾತೆಗಳ ಜತೆಗೆ, ವಿಮೆ, ಶೇರು ಮಾರುಕಟ್ಟೆಯಲ್ಲಿ ತೆರೆದ ಖಾತೆಗಳಿಗೂ ಅನ್ವಯಿಸುತ್ತದೆ.

ಭಾರತ ಹಾಗೂ ಅಮೆರಿಕಾ ನಡುವೆ ಆಗಿರುವ FATCA ಒಪ್ಪಂದದನ್ವಯ 1 ಜುಲೈ 2014 ಹಾಗೂ 31 ಆಗಸ್ಟ್ 2015 ಅವಧಿಯಲ್ಲಿ ತೆರೆಯಲಾದ ಖಾತೆದಾರರಿಂದ ಸ್ವದೃಢೀಕರಣ ಪಡೆಯಲು ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.