ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ (ಜ.03): ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯ ರೇಣುಕಾಮಂದಿರದಲ್ಲಿ ರಂಭಾಪುರಿ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಧರ್ಮ ಬೆಂಬಲಿತ ಸ್ವಾಮೀಜಿಗಳಿಂದ ಸಭೆ ನಡೆದಿದೆ.
ಸರ್ಕಾರವೇ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಸೌಲಭ್ಯಗಳ ಆಮಿಷವೊಡ್ಡಿ ಲಿಂಗಾಯತ ಸಮಾಜವನ್ನು ಒಡೆಯುತ್ತಿದೆ. ಸರ್ಕಾರದಲ್ಲಿರುವವರೇ ಈ ಕೃತ್ಯಕ್ಕೆ ಹಾಕಿದ್ದಾರೆ. ಹೀಗಾಗಿ, ಸರ್ಕಾರವೇ ನಮ್ಮ ಟಾರ್ಗೆಟ್ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
* ಲಿಂಗಾಯತ ಧರ್ಮ ಹೋರಾಟ ಸಮಿತಿ ಕರೆ ನೀಡಿದ್ದ ಚರ್ಚೆಗೆ ಸ್ವಾಗತ ನೀಡಲು ತೀರ್ಮಾನ
* ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಫೆಬ್ರವರಿ 1 ರಂದು ಸಭೆ ನಡೆಸಬೇಕೆಂದು ಮನವಿ
* ಎರಡೂ ಕಡೆಯಿಂದ 7 ಮಂದಿ ಭಾಗವಹಿಸಬೇಕು. ವಿಡಿಯೋ ಚಿತ್ರೀಕರಣ ಮಾಡಬೇಕು. ವ್ಯಕ್ತಿಗತ ಆರೋಪ ಮಾಡುವಂತಿಲ್ಲ.
* ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರಕ್ಕೆ ಸಲ್ಲಿಸಿದ್ದ 3 ಮನವಿ ತಿರಸ್ಕ್ರತಗೊಂಡ ಬಗ್ಗೆ ಆದೇಶ ಪ್ರತಿ ಬಹಿರಂಗಪಡಿಸಬೇಕು..
* ಲಿಂಗಾಯತ ಪದಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರದಿಂದ ಒಪ್ಪಿಗೆ ಇದ್ದರೆ ಬಹಿರಂಗಪಡಿಸಬೇಕು.
