ಲಿಂಗಾಯಿತ ಪ್ರತ್ಯೇಕ ಧರ್ಮ ಮಾಡಿದ್ರೆ ಹೋರಾಟ ಗ್ಯಾರಂಟಿ; ಸಿಎಂಗೆ ಸ್ವಾಮೀಜಿ ಎಚ್ಚರಿಕೆ

Lingayitha Swamiji Warns CM Siddaramaiah
Highlights

ಲಿಂಗಾಯಿತ ಧರ್ಮ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ಸಿ‌ಎಂ‌ರನ್ನು ಭೇಟಿ ಮಾಡಿದ್ದಾರೆ. 

ಬೆಂಗಳೂರು (ಮಾ. 15): ಲಿಂಗಾಯಿತ ಧರ್ಮ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ಸಿ‌ಎಂ‌ರನ್ನು ಭೇಟಿ ಮಾಡಿದ್ದಾರೆ. 

ವೀರಶೈವ-ಲಿಂಗಾಯತ ಅನ್ನೋದು ಎರಡು ಒಂದೇ. ವೀರಶೈವ ಲಿಂಗಾಯತ ಇಬ್ಬರು ಒಬ್ಬರೇ.  ತಜ್ಞರ ಸಮಿತಿಯೇ ಸರಿಯಾಗಿ ರಚನೆ ಆಗಿಲ್ಲ. ಸರ್ಕಾರ ಸಮಿತಿಯ ಶಿಫಾರಸ್ಸು ತಿರಸ್ಕಾರ ಮಾಡಬೇಕು. ಅವಶ್ಯಕತೆ ಇದ್ರೆ ಮತ್ತೊಂದು ಸಮಿತಿ‌ ಮಾಡಿ. ಎರಡು ಕಡೆಯ ಮುಖಂಡರನ್ನು ಈ ಸಮಿತಿಗೆ ಸೇರಿಸಿಕೊಳ್ಳಿ ಅಂತ ಮನವಿ ಮಾಡಿದ್ದೇವೆ ಎಂದು ಸ್ವಾಮೀಜಿ ಹೇಳಿದ್ದಾರೆ. 

ಸಿಎಂ ಕೂಡಾ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ  ಅಂತ ಹೇಳಿದ್ದಾರೆ. ಒಂದು ವೇಳೆ ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಹೋರಾಟ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.  3000 ಸಾಮೀಜಿಗಳ ಪೈಕಿ 50 ಮಠಾಧೀಶರು ಮಾತ್ರ ಧರ್ಮ ಒಡೆಯಲು ಮುಂದಾಗಿದ್ದಾರೆ. ಮಿಕ್ಕ ಮಠಾಧೀಶರು ನಮ್ಮ ಧರ್ಮ ಒಡೆಯಬಾರದು ಅಂತ ಹೇಳಿದ್ದಾರೆ.  ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಸ್ವಾಮೀಜಿಗಳು ಹೋರಾಟ ಮಾಡೋದು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯಗೆ  ದಿಂಗಾಲೇಶ್ಚರ ಸ್ವಾಮೀಜಿ ಹೇಳಿದ್ದಾರೆ. 

loader