Asianet Suvarna News Asianet Suvarna News

ರಂಭಾಪುರಿ ಮಠ ಶ್ರೀಗಳ ವಿರುದ್ಧ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ರಾಷ್ಟ್ರೀಯ ಬಸವ ದಳ ಸೇರಿದಂತೆ ವಿವಿಧ ಲಿಂಗಾಯತ ಸಂಘಟನೆಗಳು ಮತ್ತು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ರಂಭಾಪುರಿ ಶ್ರೀಗಳ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲ, ರಂಭಾಪುರಿ ಶ್ರೀಗಳು ಇದೇ ರೀತಿ ಉದ್ದಟತನ ಮೆರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದರು.

lingayats protest against rambhapuri mutt seer at belgaum
  • Facebook
  • Twitter
  • Whatsapp

ಬೆಳಗಾವಿ(ಜುಲೈ 30): ರಾಜ್ಯದಲ್ಲಿ ವೀರಶೈವ ವರ್ಸಸ್ ಲಿಂಗಾಯತ ಯುದ್ಧ ಮುಂದುವರಿದಿದೆ. ಮಾತೆ ಮಹಾದೇವಿಯವರನ್ನು ಅವಹೇಳನ ಮಾಡಿ ಮಾತನಾಡಿದರೆನ್ನಲಾದ ರಂಭಾಪುರಿ ಮಠದ ಸ್ವಾಮಿಗಳ ವಿರುದ್ಧ ಲಿಂಗಾಯತ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಇಂದು ಭಾನುವಾರ ಮಾತೆ ಮಹಾದೇವಿಯವರ ನೂರಾರು ಭಕ್ತರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಾತೆ ಮಹಾದೇವಿಯರ ಚರಿತ್ರೆ ಸರಿ ಇಲ್ಲವೆಂದು ರಂಭಾಪುರಿ ಶ್ರೀ ಹೇಳುತ್ತಾರೆ. ಆದರೆ, ಅವರ ಚರಿತ್ರೆ ತೆಗೆದಷ್ಟೂ ಕೊಳಕು ಬರುತ್ತೆ ಎಂದು ಪ್ರತಿಭಟನಾಕಾರರು ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವ ದಳ ಸೇರಿದಂತೆ ವಿವಿಧ ಲಿಂಗಾಯತ ಸಂಘಟನೆಗಳು ಮತ್ತು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ರಂಭಾಪುರಿ ಶ್ರೀಗಳ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲ, ರಂಭಾಪುರಿ ಶ್ರೀಗಳು ಇದೇ ರೀತಿ ಉದ್ದಟತನ ಮೆರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದರು.

ವರದಿ: ಮಂಜುನಾಥ ಎಚ್.ಪಾಟೀಲ್, ಸುವರ್ಣನ್ಯೂಸ್, ಬೆಳಗಾವಿ

Follow Us:
Download App:
  • android
  • ios