ಲಿಂಗಾಯತರಲ್ಲಿ 1951ರಿಂದ ದಾಖಲಾತಿಗಳಿವೆ. ಲಿಂಗಾಯತ ಧರ್ಮದಲ್ಲಿನ 99 ಉಪಜಾತಿಗಳಲ್ಲಿ 38 ಉಪಜಾತಿ ವೀರಶೈವ.

ಲಾತೂರ್(ಸೆ.03): ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇಂದು ಕೂಡ ರಾಯಚೂರು ಹಾಗೂ ಮಹಾರಾಷ್ಟ್ರದ ಲಾತೂರಿನಲ್ಲಿ ಲಿಂಗಾಯತ ಸಮುದಾಯ ರಾಲಿ ನಡೆಸಿ, ಪ್ರತ್ಯೇಕ ಧರ್ಮಕ್ಕೆ ಹಕ್ಕೊತ್ತಾಯ ಮಾಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಹೋರಾಟ ದಿನದಿನಕ್ಕೂ ಭಿನ್ನರೂಪ ಪಡೆಯುತ್ತಿದೆ. ಇಂದು ಪ್ರತ್ಯೇಕ ಧರ್ಮದ ಬೇಡಿಕೆಗಾಗಿ ಮಹಾರಾಷ್ಟ್ರದ ಲಾತೂರಿನಲ್ಲಿ ರಾಲಿ ಹಮ್ಮಿಕೊಳ್ಳಲಾಗಿತ್ತು. ರಾಲಿಯಲ್ಲಿ , ಮಾತೆ ಮಹಾದೇವಿ, ವಿನಯ್ ಕುಲಕರ್ಣಿ, ಎಂ.ಬಿ ಪಾಟೀಲ್ ಹಾಗೂ ಇತೆರೆ ಮುಖಂಡರು ಪಾಲ್ಗೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಪ್ರತಿಕ್ರಿಯಿಸಿರುವ ಮಾತೆ ಮಹಾದೇವಿ ,ಮಹಾರಾಷ್ಟ್ರದ ಸಿಎಂ ಬಳಿ ನಮ್ಮ ನಿಯೋಗ ತೆಗೆದುಕೊಂಡು ಹೋಗುತ್ತೇವೆ ಅಂದರು. ಲಿಂಗಾಯತ ಧರ್ಮದ ವಿಚಾರದಲ್ಲಿ ಯಡಿಯೂರಪ್ಪ ಹೈಕಮಾಂಡ್ ಸೂಚನೆ ಮೆರೆಗೆ ಮೌನ ವಹಿಸಿದ್ದಾರೆ. ಪಕ್ಷ ಕಿಂತಲೂ ಧರ್ಮ ಮುಖ್ಯ . ಯಾರೂ ಯಾವ ಪಕ್ಷದಲ್ಲಿದ್ದರೂ ಪರವಾಗಿಲ್ಲ ಧರ್ಮಕ್ಕಾಗಿ ಹೊರಗೆ ಬರಬೇಕು ಅಂತಾ ಕರೆ ನೀಡಿದರು.

ಬಿಜೆಪಿ ಮಂದಿ ಒತ್ತಡಕ್ಕೆ ಮಣಿದಿದ್ದಾರೆ

ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಲಾತೂರಿನಲ್ಲಿ ತುಂಬ ಅದ್ಭತವಾಗಿ ರಾಲಿ ನಡೆದಿದೆ. ಬಿಜೆಪಿಯಲ್ಲಿರುವವರ ಆತ್ಮ ರಾಲಿಯಲ್ಲಿದೆ, ಆದರ ದೇಹ ಬಿಜೆಪಿಯಲ್ಲಿದೆ. ಬಿಜೆಪಿ ಅವರು ಯಾವುದೋ ಒತ್ತಡಕ್ಕೆ ಮಣಿದು ಎಲ್ಲಿ ಕುಂತಿದ್ದಾರೆ. ಆದರೆ ಬಿಜೆಪಿಯಲ್ಲಿರುವವರ ಆತ್ಮ ರಾಲಿಯಲ್ಲಿದೆ. ಬಸವ ಅಭಿಮಾನಿಗಳಿಗೆ ಜನ ಶಕ್ತಿ ತುಂಬುತ್ತಿರುವುದು ನೋಡಿದರೆ ನಮಗೆ ಜಯ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಕೆಲವರು ತಮ್ಮ ಖುರ್ಚಿ ಅಲುಗಾಡುತ್ತೆ ಎಂದು ಷಡ್ಯಂತ್ರ ಮಾಡುತ್ತಿದ್ದಾರೆ ಹೊರತು ಅವರ ಮನಸ್ಸುಗಳು ಕೂಡ ಧರ್ಮವಿದೆ. ಎಲ್ಲಾ ರಾಜ್ಯದಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿ ಎದಿದ್ದೆ. ನಮ್ಮ ಈ ಹೋರಾಟದಲ್ಲಿ ಖಂಡಿತ ಯಶಸ್ಸು ಸಿಗಲಿದೆ' ಎಂದು ಹೇಳಿದರು.

ಲಿಂಗಾಯತ ಧರ್ಮದಲ್ಲಿ ವೀರಶೈವ ಉಪಜಾತಿ

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಬಸವಣ್ಣ ಕೇವಲ ಕರ್ನಾಟಕ ಮಹಾರಾಷ್ಟ್ರಕ್ಕೆ ಪ್ರಸ್ತುತ ಇಲ್ಲ ವಿಶ್ವಕ್ಕೆ ಪ್ರಸ್ತುತ ಇದ್ದಾರೆ. ಯಾವ ರೀತಿ ಬೌದ್ಧ, ಇಸ್ಲಾಂ,ಕ್ರಿಶ್ಚಿಯನ್ ಇದೇ ಅದೇ ರೀತಿ ಲಿಂಗಾಯತ ಧರ್ಮಕ್ಕೂ ಮಾನ್ಯತೆ ನೀಡಬೇಕು. ನಮ್ಮಲಿರುವ ಗೊಂದಲಗಳಿಂದ 900 ವರ್ಷಗಳಿಂದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ. ಬಸವಣ್ಣನವರಿಗೆ ನಾವು ಇವತ್ತು ನ್ಯಾಯ ದೊರಕಿಸಿ ಕೊಡಬೇಕಾಗಿದೆ.

ಇದು ಯಾವುದೇ ಪಕ್ಷದ ಚಳವಳಿ ಅಲ್ಲ, ಧರ್ಮದ ಚಳವಳಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಇಲ್ಲಿ ಯಾವುದೇ ಪಕ್ಷ ಇಲ್ಲ. ಇದು ಬಸವ ಪಕ್ಷ. ಸಿದ್ದಗಂಗಾ ಶ್ರೀಗಳ ಮಾರ್ಗದಲ್ಲೇ ಯಡಿಯೂರಪ್ಪ ಬರುತ್ತಾರೆ. ಜಗದೀಶ್ ಶೆಟ್ಟರ್ ಬರುತ್ತಾರೆ ಎಂದು ನಾವು ಆಶಿಸಿದ್ದೀವಿ. ಯಾವುದೋ ಒಂದು ಸಂದರ್ಭದಲ್ಲಿ ವೀರಶೈವ ಮಹಾಸಭಾ ಆಗಿದೆ. ಲಿಂಗಾಯತರಲ್ಲಿ 1951ರಿಂದ ದಾಖಲಾತಿಗಳಿವೆ. ಲಿಂಗಾಯತ ಧರ್ಮದಲ್ಲಿನ 99 ಉಪಜಾತಿಗಳಲ್ಲಿ 38 ಉಪಜಾತಿ ವೀರಶೈವ. ಬಸವಣ್ಣನವರು ಜಾತಿ ಸೃಷ್ಟಿ ಮಾಡುವಷ್ಟು ಸಣ್ಣವರಿಲ್ಲ. ಅವರು ಜಾತ್ಯಾತೀತ ಧರ್ಮ ಸೃಷ್ಟ ಮಾಡಿದ್ದಾರೆ' ಎಂದು ಹೇಳಿದರು.