ತುಮಕೂರು[ಜು. 28]  ಸಿದ್ದರಾಮಯ್ಯ ಏನ್ ಲಿಂಗಾಯಿತರಾ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಟಾಂಗ್ ನೀಡಿದ್ದಾರೆ.

ಲಿಂಗಾಯತರು ಹಿಂದು ಧರ್ಮದ ಒಳಗೂ ಇಲ್ಲ,  ಹೊರಗೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ಶಾಮನೂರು, ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಶಾಮನೂರು. ಸಿದ್ದರಾಮಯ್ಯ ಧರ್ಮ ಒಡೆಯಲು ಪ್ರಯತ್ನ ಮಾಡಿದ್ರು, ಆಗಲಿಲ್ಲ.  ಈಗ ಮತ್ತೆ ಮತ್ತೆ ಹುಟ್ಟುಹಾಕ್ತಾರೆ  ಎಂದರು.

ಡೆಡ್ಲಿ ಕಾಂಬಿನೇಶನ್.. ಗೊತ್ತಿರದ ಉತ್ತರ ಕೊಟ್ಟ ಅತೃಪ್ತರ ಜಾತಿ ಲೆಕ್ಕಾಚಾರ

ವೀರಶೈವ ಲಿಂಗಾಯತರು ಒಂದೇ ನಾಣ್ಯದ ಎರಡು ಮುಖಗಳು. ಇದನ್ನು ನಾವು ಫಾಲೋ ಮಾಡಿಕೊಂಡು ಬಂದಿದ್ದೇವೆ ಎಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೇರೂರಿನಲ್ಲಿ ಹೇಳಿಕೆ. ನೀಡಿದ್ದಾರೆ. ವೀರಶೈವ ಮಹಾಸಭಾದ ತಾಲೂಕಾ ಘಟಕದ ಉದ್ಘಾಟನೆ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೇಳಿಕೆ ನೀಡಿದ್ದಾರೆ.