ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್‌ ಪಡೆಯುತ್ತಿರುವ ರಾಜ್ಯದ ಸುಮಾರು 29 ಲಕ್ಷ ಫಲಾನುಭವಿಗಳ ಕುಟುಂಬಗಳ ಮಾಸಿಕ ವಿದ್ಯುತ್‌ ಬಳಕೆ ಮಿತಿಯನ್ನು 18 ಯೂನಿಟ್‌'ಗಳಿಂದ 40 ಯೂನಿಟ್‌ಗಳಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು(ಮೇ.27): ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ರಾಜ್ಯದ ಸುಮಾರು 29 ಲಕ್ಷ ಫಲಾನುಭವಿಗಳ ಕುಟುಂಬಗಳ ಮಾಸಿಕ ವಿದ್ಯುತ್ ಬಳಕೆ ಮಿತಿಯನ್ನು 18 ಯೂನಿಟ್'ಗಳಿಂದ 40 ಯೂನಿಟ್ಗಳಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 40 ಹೊಸ ಉಪ ಕೇಂದ್ರಗಳ ಸ್ಥಾಪನೆ:
ಪ್ರಸಕ್ತ ವರ್ಷ ವಿದ್ಯುತ್ ಸರಬರಾಜಿನಲ್ಲಿ ಸುಧಾರಣೆ ತರಲು ರಾಜ್ಯದಲ್ಲಿ ಹೊಸದಾಗಿ 40 ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರು ಪ್ರಸರಣ ವಲಯದಲ್ಲಿ 11, ಬಾಗಲಕೋಟೆ ವಲಯದಲ್ಲಿ 7, ತುಮಕೂರು ಮತ್ತು ಕಲಬುರಗಿ ವಲಯದಲ್ಲಿ ತಲಾ 6, ಹಾಸನ ಹಾಗೂ ಮೈಸೂರು ವಲಯದಲ್ಲಿ ತಲಾ 5 ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಗ್ರಾಹಕರೆಡೆಗೆ ಸುಗಮವಾಗಿ ರವಾನಿಸಲು ಮತ್ತು ವಿವಿಧ ಪ್ರದೇಶಗಳ ವೋಲ್ಟೇಜ್ ಸಮಸ್ಯೆ ನಿವಾರಿಸಲು ಅನುಕೂಲ ಆಗಲಿದೆ. ಪ್ರಸರಣದಲ್ಲಿ ನಷ್ಟಕಡಿಮೆಯಾಗಿ, ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಅನುಕೂಲವಾಗಲಿದೆ ಎಂದರು.
