ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 32ಕ್ಕೂ ಹೆಚ್ಚು ಮಂದಿ ಬಲಿ| ಮೃತರ ಕುಟುಂಬಕ್ಕೆ 4 ಲಕ್ಷ ರು.

ಲಖನೌ[ಜ.22]: ಉತ್ತರ ಭಾರತದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜನಜೀವನ ತತ್ತರಗೊಂಡಿರುವ ಬೆನ್ನಲ್ಲೇ, ಸಿಡಿಲು ಬಡಿದು 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಸಿಡಿಲಿಗೆ ಇತರೆ 13 ಮಂದಿ ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾನ್ಪುರ ಹಾಗೂ ಫತೇಪುರದಲ್ಲಿ ತಲಾ 7 ಮಂದಿ, ಝಾನ್ಸಿಯಲ್ಲಿ 5, ಜಲೌನ್‌ನಲ್ಲಿ 4, ಹಮೀರ್‌ಪುರದಲ್ಲಿ 3, ಗಾಜಿಪುರದಲ್ಲಿ ಇಬ್ಬರು ಹಾಗೂ ಜಾನ್‌ಪುರ, ಪ್ರತಾಪ್‌ಗಢ, ಕಾನ್ಪುರ ದೆಹಾತ್‌ ಮತ್ತು ಚಿತ್ರಕೂಟದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಸಂತಾಪ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್‌ ಮೃತರ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.