Asianet Suvarna News Asianet Suvarna News

(ವಿಡಿಯೋ)ಟ್ರಾಫಿಕ್ ಇದ್ದ ರಸ್ತೆಯಲ್ಲಿ ಬೆಂಕಿಯ ಮಳೆ: ದೃಶ್ಯ ನೋಡಿ ದಂಗಾಗ್ತೀರಿ!

ಕಾರಿನಲ್ಗಲಿ ಕುಳಿತು ಒಂದು ರೌಂಡ್ ಹಾಕಿಕೊಂಡು ಬರುವ ಎಂದು ನೀವು ಹೊರಟಿರುತ್ತೀರಾ ಈ ವೇಳೆ ಇದ್ದಕ್ಇದ್ದಂತೆ ಬೆಂಕಿ ಮಳೆಯಾದರೆ? ಅಬ್ಬಾ...! ಇಂತಹ ಸನ್ನಿವೇಶವನ್ನು ಕಲ್ಪಿಸಲೂ ಭಯವಾಗುತ್ತದೆ. ಆದರೆ ಚೀನಾದ ಶೇನ್ಯಾಂಗ್'ನಲ್ಲಿ ಇಂತಹುದೇ ಘಟನೆಯೊಂದು ಸಂಭವಿಸಿದೆ. ಇನ್ನು ಈ ಘಟನೆಯಿಡೀ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದೆ. ಆದರೆ ಇವೆಲ್ಲದರ ಮಧ್ಯೆ ಬೆಂಕಿ ಮಳೆ ಬೀಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತದೆ, ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ

lightning strike on busy street in china heartbeat
  • Facebook
  • Twitter
  • Whatsapp

ನವದೆಹಲಿ(ಮೇ.17): ಕಾರಿನಲ್ಗಲಿ ಕುಳಿತು ಒಂದು ರೌಂಡ್ ಹಾಕಿಕೊಂಡು ಬರುವ ಎಂದು ನೀವು ಹೊರಟಿರುತ್ತೀರಾ ಈ ವೇಳೆ ಇದ್ದಕ್ಇದ್ದಂತೆ ಬೆಂಕಿ ಮಳೆಯಾದರೆ? ಅಬ್ಬಾ...! ಇಂತಹ ಸನ್ನಿವೇಶವನ್ನು ಕಲ್ಪಿಸಲೂ ಭಯವಾಗುತ್ತದೆ. ಆದರೆ ಚೀನಾದ ಶೇನ್ಯಾಂಗ್'ನಲ್ಲಿ ಇಂತಹುದೇ ಘಟನೆಯೊಂದು ಸಂಭವಿಸಿದೆ. ಇನ್ನು ಈ ಘಟನೆಯಿಡೀ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದೆ. ಆದರೆ ಇವೆಲ್ಲದರ ಮಧ್ಯೆ ಬೆಂಕಿ ಮಳೆ ಬೀಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತದೆ, ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಪಟ್ಟಣದಲ್ಲಿ ಬೆಂಕಿ ಮಳೆ ಆಗಲು ಹೇಗೆ ಸಾಧ್ಯ ಎಂದು ಯೋಚಿಸುವವರೆಲ್ಲರೂ, ಪತ್ರಿಕೆಗಳಲ್ಲಿ ಬಿತ್ತರಿಸಿದ 'ಸಿಡಿಲು ಬಡಿದು ಜನರ ಸಾವು' ಇಂತಹ ತಲೆಬರಹವಿದ್ದ ಸುದ್ದಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗ ಸಿಡಿಲು ಬಡಿಯಲು ಹೇಗೆ ಸಾಧ್ಯ? ಸಿಡಿಲು ಹೇಗೆ ಬಡಿಯುತ್ತದೆ? ಎಂಬ ಕುತೂಹಲಕಾರಿ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ ಬೆಳೆಯುತ್ತಿದ್ದಂತೆ ಪ್ರಾಕೃತಿಕ ಕ್ರಿಯೆಗಳ ಕುರಿತಾದ ಜ್ಞಾನ ನಮ್ಮಲ್ಲಿ ವೃದ್ಧಿಯಾಗಿ ಇವಕ್ಕೆ ಉತ್ತರ ಸಿಕ್ಕಿತು. ವಾಸ್ತವವಾಗಿ ಶೇನ್ಯಾಂಗ್'ನಲ್ಲೂ ಸಿಡಿಲು ಬಡಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಮೇ 11 ರಂದು ನಡೆದ ಘಟನೆಯ ವಿಡಿಯೋ ಇದಾಗಿದ್ದು, ಎಂದಿನಂತೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಆದರೆ ಒಂದೇ ಬಾರಿ ಇದ್ದಕ್ಕಿದ್ದಂತೆ ಕತ್ತಲಾವರಿಸುತ್ತದೆ. ಇದಾದ ಮರುಕ್ಷಣವೇ ರಸ್ತೆಗೆ ಸಿಡಿಲು ಬಡಿದಿದ್ದು, ಬೆಂಕಿ ಕಿಡಿಗಳು ಮಳೆಯಂತೆ ಬೀಳಲಾರಂಭಿಸುತ್ತವೆ. ಈ ದೃಶ್ಯಗಳನ್ನು ನೋಡಿದರೆ ಬೆಂಕಿ ಮಳೆಯಂತೆ ಭಾಸವಾಗುತ್ತದೆ.

ಸಿಡಿಲು ಬಡಿದ ಸಂದರ್ಭದಲ್ಲಿ ರಸ್ತೆಯಲ್ಲಿ ಯಾರೂ ಓಡಾಡದಿದ್ದುದ್ದರಿಂದ ಯಾವುದೇ ಪ್ರಾಣ ಹಾನಿಯೂ ಸಂಭವಿಸಿಲ್ಲ ಎಂಬುವುದೇ ಸಮಾಧಾನದ ವಿಚಾರ

Follow Us:
Download App:
  • android
  • ios