ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿ ರಕ್ಷಣೆ: ವಿಡಿಯೋ ವೈರಲ್..!
ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆ
ಮಹಿಳಾ ಲೈಫ್ ಗಾರ್ಡ್ ವಿಡಿಯೋ ವೈರಲ್
ಮುಳುಗುತ್ತಿದ್ದ ಬಾಲಕಿಯನ್ನು ಗಮನಿಸದ ಇತರರು
ಮಹಿಳಾ ಲೈಫ್ ಗಾರ್ಡ್ ಕಾರ್ಯಕ್ಕೆ ಭಾರೀ ಮೆಚ್ಚುಗೆ
ವಾಷಿಂಗ್ಟನ್(ಜೂ.23): ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯೋರ್ವಳನ್ನು ಮಹಿಳಾ ಲೈಫ್ ಗಾರ್ಡ್ ರಕ್ಷಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಕಿಕ್ಕಿರಿದು ತುಂಬಿದ್ದ ಈಜುಕೊಳದಲ್ಲಿ ಟ್ಯೂಬ್ ಸಹಾಯವಿಲ್ಲದೇ ಈಜಲು ಬಂದ ಬಾಲಕಿ ಮುಳಗುತ್ತಿರುವುದನ್ನು ಕಂಡ ಮಹಿಳಾ ಲೈಫ್ ಗಾರ್ಡ್, ಆಕೆಯನ್ನು ರಕ್ಷಿಸಿದ್ದಾರೆ.
ಬಾಲಕಿ ಪಕ್ಕದಲ್ಲಿಯೇ ಹಲವಾರು ಜನ ಈಜುತ್ತಾ ಮೋಜು ಮಾಡುತ್ತಿದ್ದರೂ ಯಾರೋಬ್ಬರೂ ಆಕೆ ಮುಳುಗುತ್ತಿರುವುದನ್ನು ಗಮನಿಸಿಲ್ಲ. ಆದರೆ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಂಡ ಮಹಿಳಾ ಲೈಫ್ ಗಾರ್ಡ್, ಕೂಡಲೇ ಈಜುಕೊಳಕ್ಕೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ.
ಈ ಕುರಿತು ಲೈಫ್ ಗಾರ್ಡ್ ರೆಸ್ಕ್ಯೂ ಯುಟ್ಯೂಬ್ ಗೆ ವಿಡಿಯೋ ಅಪ್ಲೋಡ್ ಮಾಡಿದ್ದು, ಮಹಿಳಾ ಲೈಪ್ ಗಾರ್ಡ್ ಸಹಾಯಕ್ಕೆ ಬರುವುದು ಸ್ವಲ್ಪವೇ ತಡವಾಗಿದ್ದರೂ ಬಾಲಕಿಯ ಪ್ರಾಣಕ್ಕೆ ಆಪತ್ತು ಎದುರಾಗಲಿತ್ತು ಎಂದು ಹೇಳಿದೆ.