ಒಂದು ಕಡೆ ದೋಸ್ತಿ ಸರಕಾರದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದ್ದರೆ ಇತ್ತ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗ[ಜು. 01]  ಐಎಂಎ ಪ್ರಕರಣದಲ್ಲಿ ಜನರ ಹಣ ದೋಚಿಕೊಂಡು ಪರಾರಿ ಆಗಿರುವ ಮನ್ಸೂರ್ ಜೀವಂತವಾಗಿ ಉಳಿಯೋದು ಅನುಮಾನವೆಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಶಿವಮೊಗ್ಗದ ಹೋಟೆಲ್ ವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಡವರ ಶ್ರಮದ ಹಣವನ್ನ ಮನ್ಸೂರ್ ಲೂಟಿಮಾಡಿಕೊಂಡು ಪರಾರಿ ಆಗಿದ್ದು, ಅವನನ್ನ ಮೈತ್ರಿ ಪಕ್ಷದವರೆ ಸಾಯಿಸಬಹುದು ಅಥವಾ ಆತನ ಆತ್ಮಹತ್ಯೆಗೆ ಕಾರಣವಾದರೂ ಆಶ್ಚರ್ಯವಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಮನ್ಸೂರ್ ಖಾನ್ ಎಲ್ಲಿದ್ದಾನೆ?

ಅವರ ಸಾವಿನ ಮೇಲೆ ಮೈತ್ರಿ ಪಕ್ಷದ ಪ್ರಭಾವಿಗಳ ಅಳಿವು ಉಳಿವಿನ ಪ್ರಶ್ನೆ ಇದೆ. ಇದೇ ಕಾರಣಕ್ಕೆ ದೋಸ್ತಿ ಸರಕಾರದವರೆ ಆತನ ಸಾವಿಗೆ ಕಾರಣವಾಗಬಲ್ಲರು ಎಂದು ಹೇಳಿದರು.