ಬೆಂಗಳೂರು [ಆ.01]: ಐಎಂಎ ವಂಚಕ ಮನ್ಸೂರ್ ಅಲಿ ಖಾನ್ ಸದ್ಯ ಇಡಿ ಅಧಿಕಾರಿಗಳ ಬಳಿ ತಮಗೆ ಪ್ರಾಣಾಪಾಯ ಇರುವುದಾಗಿ ಆತಂಕ ತೋಡಿಕೊಂಡಿದ್ದಾರೆ. 

ವಿಚಾರಣೆ ವೇಳೆ ಇಡಿ ಅಧಿಕಾರಿಗಳ ಮುಂದೆ ಪ್ರಭಾವಿಗಳ ಹೆಸರು ಹೇಳದ ಮನ್ಸೂರ್ ತನಗೆ ಇವರಿಂದ ಜೀವ ಭಯ ಇದೆ. ಹೆಸರು ಹೇಳಿದರೆ ಪ್ರಭಾವಿಗಳು ನನಗೆ ಅಪಾಯ ಮಾಡಬಹುದು ಎಂದು ಹೇಳಿದ್ದಾರೆ. 

ಐಎಂಎಗೆ ಸೇರಿದ ಬೇನಾಮಿ ಜಮೀನು ವಶ

ಶಾರ್ಪ್ ಶೂಟರ್ಗಳಿಂದ ತಮ್ಮ ಮೇಲೆ ದಾಳಿ ನಡೆಸಬಹುದಾದ ಶಂಕೆ ಇದ್ದು, ಸುಪಾರಿ ಪಡೆದಿರುವ ಅವರು ಯಾವಾಗ ಬೇಕಾದರೂ ನನ್ನ ಪ್ರಾಣಕ್ಕೆ ಅಪಾಯ ತರಬಹುದು ಎಂದಿದ್ದಾರೆ.

IMA ವಂಚನೆ: ಮನ್ಸೂರ್‌ನಿಂದಲೇ ಎಸ್ ಐಟಿಗೆ ಸಿಕ್ಕಿದೆ ಮುಖ್ಯ ಸಾಕ್ಷಿ

ಜೀವ ಭಯದ ಆತಂಕ ತೋಡಿಕೊಂಡ ಹಿನ್ನೆಲೆ ಮನ್ಸೂರ್ ಖಾನ್ ಭದ್ರತೆಗಾಗಿ ಸಿಆರ್ ಪಿಎಫ್ ಪಡೆ ನಿಯೋಜಿಸಲಾಗಿದೆ. ಭದ್ರತೆಗಾಗಿ ಇಬ್ಬರು ಸಿಆರ್ ಪಿ ಎಫ್  ಇನ್ಸ್ ಪೆಕ್ಟರ್ ನೇತೃತ್ವದ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.