ಸಚಿವರು ತಮ್ಮ ಮೇಲೆ ಧಮ್ಕಿ ಹಾಕಿರುವ ಆಡಿಯೋ ಪ್ರಸಾರವಾಗುತ್ತಿದ್ದಂತೆ ನನಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ನಿನ್ನೆ ಕೂಡ ನನ್ನನ್ನು ನಾಲ್ಕು ಕಾರುಗಳಲ್ಲಿ ಕೆಲವು ಅಪರಿಚಿತರು ಧಾರವಾಡದಿಂದ ಹಂಗರಕಿವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಾನು ಹೆದರಿಕೆಯಿಂದಲೇ ಮನೆಗೆ ಹೋದೆ ಎಂದು ಆನಂದ್ ಹೇಳಿಕೊಂಡಿದ್ದಾರೆ.
ಬೆಂಗಳೂರು(ನ.24): ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯಿಂದ ನನಗೆ ಜೀವ ಬೆದರಿಕೆ ಇದೆ ಎಂದು ಯೋಗೀಶ್ ಗೌಡ ಪರ ವಕೀಲ ಆನಂದ್ ಸುವರ್ಣ ನ್ಯೂಸ್ ಬಳಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಸಚಿವರು ತಮ್ಮ ಮೇಲೆ ಧಮ್ಕಿ ಹಾಕಿರುವ ಆಡಿಯೋ ಪ್ರಸಾರವಾಗುತ್ತಿದ್ದಂತೆ ನನಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ನಿನ್ನೆ ಕೂಡ ನನ್ನನ್ನು ನಾಲ್ಕು ಕಾರುಗಳಲ್ಲಿ ಕೆಲವು ಅಪರಿಚಿತರು ಧಾರವಾಡದಿಂದ ಹಂಗರಕಿವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಾನು ಹೆದರಿಕೆಯಿಂದಲೇ ಮನೆಗೆ ಹೋದೆ ಎಂದು ಆನಂದ್ ಹೇಳಿಕೊಂಡಿದ್ದಾರೆ.
ನಾನು ಹತ್ಯೆಯಾದ ಯೋಗೀಶ್ ಅವರ ಕುಟುಂಬಕ್ಕೆ ಕಾನೂನು ನೆರವು ನೀಡುತ್ತಿದ್ದೆ. ಇದಕ್ಕೆ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು. ನನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದೆಲ್ಲಾ ನಿಂದಿಸಿದ್ದಾರೆ. ಹಾಗಾಗಿ ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.