2008 ಮೇ 25 ರಂದು ಕೋಲಾರ ತಾಲೂಕು ಎಸ್.ಅಗ್ರಹಾರದಲ್ಲಿ, ಕಾಂಗ್ರೆಸ್ ಮುಖಂಡ ಪೆರುಮಾಳ್ ಹತ್ಯೆ ನಡೆದಿತ್ತು. ಅಂದು ರಾಜಕೀಯ ವೈಸಮ್ಯದ ಹಿನ್ನೆಲೆ ನಡೆದಿದ್ದ ಕೊಲೆಗೆ ಇಂದು ತೀರ್ಪು ಹೊರಬಂದಿದೆ.

ಕೋಲಾರ (ಜ.13): ಕೋಲಾರ ಜಿಲ್ಲಾ ನ್ಯಾಯಾಲಯ ಇಂದು ಮಹತ್ವದ ತೀರ್ಪಿಗೆ ಸಾಕ್ಷಿಯಾಗಿದೆ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿದ್ದ ಓರ್ವ ಮಹಿಳೆಯೂ ಸೇರಿದಂತೆ 19 ಜನ ಅಪರಾಧಿಗಳಿಗೆ, ಇಂದು ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

2008 ಮೇ 25 ರಂದು ಕೋಲಾರ ತಾಲೂಕು ಎಸ್.ಅಗ್ರಹಾರದಲ್ಲಿ, ಕಾಂಗ್ರೆಸ್ ಮುಖಂಡ ಪೆರುಮಾಳ್ ಹತ್ಯೆ ನಡೆದಿತ್ತು. ಅಂದು ರಾಜಕೀಯ ವೈಸಮ್ಯದ ಹಿನ್ನೆಲೆ ನಡೆದಿದ್ದ ಕೊಲೆಗೆ ಇಂದು ತೀರ್ಪು ಹೊರಬಂದಿದೆ.

19 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸುವ ಜೊತೆಗೆ, 10 ಸಾವಿರ ರುಪಾಯಿ ದಂಡವನ್ನು ನೀಡುವಂತೆ ಕೋರ್ಟ್​ ಆದೇಶಿಸಿದೆ.

ಕೋಲಾರ ಜಿಲ್ಲಾ 2 ನೆ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಧೀಶ ಶ್ರೀಕಾಂತ್ ವಟವಟಿ ಈ ಮಹತ್ತರ ತೀರ್ಪು ನೀಡಿದ್ದಾರೆ. ತೀರ್ಪಿನ ಬಳಿಕ ಅಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪರಾಧಿಗಳ ಕುಟುಂಬಸ್ಥರು ನ್ಯಾಯಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.