ಗುಜರಾತ್ ವಿಧಾನಸಭಾ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಗುಜರಾತ್’ನಲ್ಲಿ ಪ್ರಚಾರ ಕಾರ್ಯ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊಸದಿಲ್ಲಿ (ಡಿ.12): ಗುಜರಾತ್ ವಿಧಾನಸಭಾ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಗುಜರಾತ್’ನಲ್ಲಿ ಪ್ರಚಾರ ಕಾರ್ಯ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ತಮ್ಮ ವಿರುದ್ಧದ ಸುಳ್ಳು ಸುದ್ದಿಗಳು ಪ್ರತೀ ಗುಜರಾತಿಗಳಿಗೂ ನೋವುಂಟು ಮಾಡುತ್ತದೆ. ತಮ್ಮ ಜೀವನವೇ ಗುಜರಾತ್ ಹಾಗೂ ದೇಶದ ಜನತೆಯ ಜೀವನವನ್ನು ಸುಧಾರಿಸಲು ಮೀಸಲಾಗಿದೆ ಎಂದು ಹೇಳಿದರು.

ಕಳೆದ ಮೂರುವರೆ ವರ್ಷಗಳಿಂದ ಗುಜರಾತ್ ಉದ್ದಗಲಕ್ಕೂ ಕೂಡ ಪ್ರವಾಸ ಮಾಡಿದ್ದೇನೆ. ಈ ವೇಳೆ ಇಲ್ಲಿನ ಜನರು ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. 40 ವರ್ಷಗಳ ಸಾರ್ವಜನಿಕ ಜೀನದಲ್ಲಿ ಸಾಕಷ್ಟು ಜನ ಪ್ರೀತಿಗಳಿಸಿದ್ದೇನೆ. ಅವರ ಪ್ರೀತಿ ವಿಶ್ವಾಸವೇ ನನಗೆ ಶಕ್ತಿ ಎಂದು ಪ್ರಧಾನಿ ಹೇಳಿದ್ದಾರೆ.