Asianet Suvarna News Asianet Suvarna News

ಇದೀಗ ಮತ್ತೊಂದು ಬ್ಯಾಂಕ್ ವಿಲೀನ

ಐಡಿಬಿಐ ಬ್ಯಾಂಕ್ ಸಾಲದ ಹೊರೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಉದ್ಧಾರಕ್ಕೆಂದು ಶೇ. 51ರಷ್ಟು ನಿಯಂತ್ರಿತ ಪಾಲನ್ನು ಖರೀದಿಸಲು ಎಲ್‌ಐಸಿ ಮುಂದಾಗಿದ್ದು, ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ಸಿಕ್ಕಿದೆ. 

LIC  And IDBI Bank deal gets cabinet nod
Author
Bengaluru, First Published Aug 2, 2018, 10:55 AM IST

ನವದೆಹಲಿ: ಐಡಿಬಿಐ ಬ್ಯಾಂಕ್‌ನಲ್ಲಿನ ಶೇ. 51ರಷ್ಟು ಪಾಲನ್ನು ಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ಖರೀದಿಸುವ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 

ಐಡಿಬಿಐ ಬ್ಯಾಂಕ್ ಸಾಲದ ಹೊರೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಉದ್ಧಾರಕ್ಕೆಂದು ಶೇ. 51ರಷ್ಟು ನಿಯಂತ್ರಿತ ಪಾಲನ್ನು ಖರೀ ದಿಸಲು ಎಲ್‌ಐಸಿ ಮುಂದಾಗಿದೆ. ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದಿಸಿತು ಎಂದು ಸಭೆಯ ಬಳಿಕ ಸಚಿವ ಪೀಯೂಶ್ ಗೋಯಲ್ ಹಾಗೂ ರವಿಶಂಕರಪ್ರಸಾದ್ ತಿಳಿಸಿದರು. 

ಈಗಾಗಲೇ ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಶೇ. 7- 7.5ರಷ್ಟು ಪಾಲು ಹೊಂದಿತ್ತು. ಇನ್ನು ಬಹುಮತಕ್ಕೆ ಬೇಕಾದಷ್ಟು ಉಳಿದ ಪಾಲನ್ನು ಅದು ಖರೀದಿಸಲಿದೆ. ಈ ಖರೀದಿ ವಹಿವಾಟಿನಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ. ಆದರೆ ಐಡಿಬಿಐ ಬ್ಯಾಂಕ್‌ಗೆ 10 ರಿಂದ 13 ಸಾವಿರ ಕೋಟಿ ರು. ಬಂಡವಾಳ ಹರಿದುಬರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios